ಭಾನುವಾರ, ಫೆಬ್ರವರಿ 28, 2021
21 °C

ಚೆನ್ನೈ: ಕ್ಯಾನ್ಸರ್‌ ಸಂಸ್ಥೆಯ ಅಧ್ಯಕ್ಷೆ ಡಾ.ವಿ ಶಾಂತಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಚೆನ್ನೈನ ಕ್ಯಾನ್ಸರ್ ಸಂಸ್ಥೆಯ ಅಧ್ಯಕ್ಷೆ ಡಾ.ವಿ.ಶಾಂತಾ(96) ಮಂಗಳವಾರ ನಿಧನರಾದರು.

‘ಸೋಮವಾರ ರಾತ್ರಿ 9 ಗಂಟೆಗೆ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅದನ್ನು ವೈದ್ಯರಿಗೆ ತೆಗೆಯಲು ಸಾಧ್ಯವಾಗಿಲ್ಲ. ಮಂಗಳವಾರ ಬೆಳಿಗ್ಗೆ 3.55ಕ್ಕೆ ಅವರು ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದರು’ ಎಂದು ಕ್ಯಾನ್ಸರ್‌ ಸಂಸ್ಥೆಯ ಮೂಲಗಳು ತಿಳಿಸಿವೆ.

ಡಾ. ಶಾಂತಾ ಅವರ ಪಾರ್ಥಿವ ಶರೀರವನ್ನು ಹಳೆಯ ಕ್ಯಾನ್ಸರ್‌ ಸಂಸ್ಥೆಯ ಆವರಣಕ್ಕೆ ಕೊಂಡೊಯ್ಯಲಾಯಿತು.

‘ಡಾ. ಶಾಂತಾ ಅವರನ್ನು ಕ್ಯಾನ್ಸರ್‌ ಆರೈಕೆಯ ‘ಡೋಯೆನ್‌’ ಎಂದು ಕರೆಯಲಾಗುತ್ತಿತ್ತು. ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ ಅವರ ಕೆಲಸಗಳು ಶಾಶ್ವತವಾಗಿ ಜೀವಂತವಾಗಿರುತ್ತವೆ’ ಎಂದು ಡಾ. ಆನಂದ ರಾಜ್‌ ಅವರು ತಿಳಿಸಿದರು.

ಡಾ. ಶಾಂತಾ ಅವರಿಗೆ, ಮ್ಯಾಗ್ಸೆಸ್ಸೆ, ಪದ್ಮಶ್ರೀ, ಪದ್ಮಭೂಷಣ್, ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು