ಪಿನಾಕಾ ರಾಕೆಟ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಬಲ್ಸೋರೆ, ಒಡಿಶಾ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿರುವ, ವಿಸ್ತರಿಸಿದ ವ್ಯಾಪ್ತಿಯನ್ನು ಹೊಂದಿದ ‘ಪಿನಾಕಾ’ ರಾಕೆಟ್‌ನ ಪರೀಕ್ಷಾರ್ಥ ಪ್ರಯೋಗವನ್ನು ಶುಕ್ರವಾರ ಇಲ್ಲಿನ ಕರಾವಳಿ ತೀರದ ಚಾಂದಿಪುರ್‌ನಲ್ಲಿ ಯಶಸ್ವಿಯಾಗಿ ನಡೆಸಿತು.
ವಿವಿಧ ಹಂತದಲ್ಲಿ, ನಿಗದಿತ ಗುರಿಯತ್ತ ತ್ವರಿತಗತಿಯಲ್ಲಿ ಒಟ್ಟಾರೆ 25 ಪಿನಾಕಾ ರಾಕೆಟ್‌ಗಳ ಪ್ರಯೋಗವನ್ನು ಗುರುವಾರ ಮತ್ತು ಶುಕ್ರವಾರ ನಡೆಸಲಾಗಿದೆ.
122 ಎಂ.ಎಂ ಕ್ಯಾಲಿಬರ್ ರಾಕೆಟ್‌ಗಳನ್ನು ಬಹುಹಂತದ ರಾಕೆಟ್ ಉಡಾವಣಾ ವಾಹಕದಿಂದ (ಎಂಬಿಆರ್‌ಎಲ್) ರಾಕೆಟ್‌ಗಳನ್ನು ಪ್ರಯೋಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ರಾಕೆಟ್‌ಗಳು ನಿಗದಿತ ಗುರಿ ಮುಟ್ಟಿದವು. ಸಾಮರ್ಥ್ಯ ವೃದ್ಧಿಪಡಿಸಲಾದ ಪಿನಾಕಾ ರಾಕೆಟ್‌ಗಳು 45 ಕಿ.ಮೀ ದೂರದವರೆಗೂ ನಿಗದಿತ ಗುರಿಯನ್ನು ನಾಶಪಡಿಸಬಲ್ಲವು ಎಂದು ಮೂಲಗಳು ತಿಳಿಸಿವೆ. ನಿಗದಿತ ಗುರಿಯನ್ನು ತಲುಪಲಿವೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಎಲ್ಲ ರಾಕೆಟ್‌ಗಳನ್ನು ವಿವಿಧ ಪರಿಕರಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಯಿತು ಎಂದು ಮೂಲಗಳು ವಿವರಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.