ಸೋಮವಾರ, ಮಾರ್ಚ್ 1, 2021
19 °C

ಸೇನೆ ದಿನಾಚರಣೆಯಲ್ಲಿ ಗಮನ ಸೆಳೆದ ಡ್ರೋನ್‌ಗಳ ಕಸರತ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಲ್ಲಿನ ಜನರಲ್‌ ಕಾರಿಯಪ್ಪ ಮೈದಾನದಲ್ಲಿ ಭಾರತೀಯ ಸೇನೆ ದಿನಾಚರಣೆ ಅಂಗವಾಗಿ ನಡೆದ ಪರೇಡ್‌ನಲ್ಲಿ ‍ಪ್ರದರ್ಶನಗೊಂಡ ಡ್ರೋನ್‌ ಕಾರ್ಯಾಚರಣೆಗಳು ಗಮನ ಸೆಳೆದವು.

ಶತ್ರು ಪಾಳೆಯದ ಮೇಲೆ ಆಕ್ರಮಣ ನಡೆಸಿ, ಬಾಂಬ್‌ ಸ್ಫೋಟಿಸುವುದು, ಗಾಯಗೊಂಡ ಯೋಧರಿಗೆ ಚಿಕಿತ್ಸೆ ನೀಡಲು ಔಷಧಿಗಳ ಸಾಗಣೆಯಂತಹ ಕಸರತ್ತುಗಳನ್ನು ಪ್ರದರ್ಶಿಸಲಾಯಿತು. ಡ್ರೋನ್‌ ಬಳಸಿ ನಡೆಸುವ ಕಾರ್ಯಾಚರಣೆಗಳನ್ನು ಇದೇ ಮೊದಲ ಬಾರಿಗೆ ಈ ದಿನಾಚರಣೆ ಪರೇಡ್‌ನಲ್ಲಿ ಪ್ರದರ್ಶಿಸಲಾಯಿತು.

ಯುದ್ಧವಿಮಾನ ವಿರೋಧಿ ವ್ಯವಸ್ಥೆ ‘ಸಚಿಲ್ಕಾ’, ಬ್ರಹ್ಮೋಸ್‌ ಕ್ಷಿಪಣಿಗಳು, ಯೋಧರು ಬಳಸುವ ವಾಹನಗಳಾದ ಬಿಎಂಪಿ–2, ಟಿ–72, ಬಹುಹಂತದ ರಾಕೆಟ್‌ ಉಡ್ಡಯನ ವ್ಯವಸ್ಥೆ ‘ಪಿನಾಕ’ ಹಾಗೂ ಸೇತುವೆ ನಿರ್ಮಾಣಕ್ಕೆ ಬಳಸುವ ಟ್ಯಾಂಕ್‌ಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

ವಿವಿಧ ಕಾರ್ಯಾಚರಣೆ ವೇಳೆ ಪರಾಕ್ರಮ ಪ್ರದರ್ಶಿಸಿದ ಯೋಧರಿಗೆ ಸೇನಾಪಡೆ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜ. ಬಿಪಿನ್‌ ರಾವತ್‌, ಏರ್‌ಚೀಫ್‌ ಮಾರ್ಷಲ್‌ ಆರ್‌.ಕೆ.ಎಸ್‌.ಭದೌರಿಯಾ, ನೌಕಾಪಡೆ ಮುಖ್ಯಸ್ಥ ಆಡ್ಮಿರಲ್‌ ಕರಂವೀರ್‌ ಸಿಂಗ್‌ ಹಾಜರಿದ್ದರು.

ಜನರಲ್‌ ಕೆ.ಎಂ.ಕಾರಿಯಪ್ಪ ಅವರು 1949ರ ಜ. 15ರಂದು ಭಾರತೀಯ ಸೇನೆಯ ಮೊದಲ ಕಮಾಂಡರ್‌ ಇನ್‌ ಚೀಫ್‌ ಆಗಿ ಅಧಿಕಾರ ಸ್ವೀಕರಿಸಿದರು. ಈ ಕಾರಣಕ್ಕಾಗಿ ಪ್ರತಿವರ್ಷ ಜ. 15ರಂದು ಸೇನೆ ದಿನವನ್ನು ಆಚರಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು