ಕೊಚ್ಚಿ: ಕಾಸರಗೋಡು ನಿವಾಸಿ ಅಳಿಯ ₹107 ಕೋಟಿ ಪಡೆದು ವಂಚಿಸಿರುವುದಾಗಿ ದುಬೈನಲ್ಲಿ ನೆಲೆಸಿರುವ ಅನಿವಾಸಿ ಉದ್ಯಮಿ ಅಬ್ದುಲ್ ಲಾಹಿರ್ ಹಸನ್ ಎಂಬುವವರು ಆರೋಪಿಸಿದ್ದಾರೆ.

2017ರಲ್ಲಿ ಇವರ ಮಗಳ ಮದುವೆಯು ಕಾಸರಗೋಡಿನ ಮುಹಮ್ಮದ್ ಹಫೀಜ್ ಜೊತೆ ನಡೆದಿತ್ತು.

‘ಹಲವು ಆಸ್ತಿಗಳನ್ನು ಹಫೀಜ್ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ ಮತ್ತು ಮಗಳಿಗೆ ಉಡುಗೊರೆಯಾಗಿ ನೀಡಿದ್ದ ಚಿನ್ನಾಭರಣಗಳನ್ನೂ ಪಡೆದುಕೊಂಡಿದ್ದಾನೆ’ ಎಂದು ಹಸನ್ ಅವರು ಆಲುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

‘ದೂರು ನೀಡಿ ಮೂರು ತಿಂಗಳಾದರೂ ಆರೋಪಿಯನ್ನು ಬಂಧಿಸುವಲ್ಲಿ ಆಲುವಾ ಪೊಲೀಸರು ವಿಫಲರಾಗಿದ್ದಾರೆ’ ಎಂದೂ ಉದ್ಯಮಿ ಹೇಳಿದ್ದಾರೆ.

ಆರೋಪಿ ಗೋವಾದಲ್ಲಿರುವುದಾಗಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆಯನ್ನು ಗುರುವಾರ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

‘ವಿವಿಧ ಕಾರಣಗಳನ್ನು ನೀಡಿ ಅಳಿಯ ತನ್ನಿಂದ ಹಣ ಪಡೆದಿರುವುದಾಗಿ’ ಉದ್ಯಮಿ ದೂರಿನಲ್ಲಿ ಆರೋಪಿಸಿದ್ದಾರೆ.

‘ವಂಚನೆ ಪ್ರಕರಣದಲ್ಲಿ ಹಸನ್ ಅವರ ಅಳಿಯನ ಜೊತೆ ಬೇರೆಯವರೂ ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.