ಬುಧವಾರ, ಮಾರ್ಚ್ 22, 2023
22 °C

ಬ್ಯಾಂಕ್‌ಗೆ ವಂಚನೆ ಪ್ರಕರಣ: ಶಕ್ತಿಭೋಗ್ ಫುಡ್ಸ್‌ ಸಂಸ್ಥೆಯ ಅಧ್ಯಕ್ಷರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ಯಾಂಕ್‌ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದಡಿ ದೆಹಲಿ ಮೂಲದ ಶಕ್ತಿಭೋಗ್ ಫುಡ್ಸ್‌ ಲಿಮಿಟೆಡ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇವಲ್‌ ಕೃಷನ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಬಂಧಿಸಲಾಗಿದ್ದು, ಸೋಮವಾರ ವಿಶೇಷ ಪಿಎಂಎಲ್‌ಎ ಕೋರ್ಟ್‌ ಎದುರು ಹಾಜರುಪಡಿಸಲಾಯಿತು. ಕೋರ್ಟ್‌ ಜುಲೈ 9ರವರೆಗೂ ಇ.ಡಿ ವಶಕ್ಕೆ ವಿಚಾರಣೆಗೆ ಒಪ್ಪಿಸಿದೆ ಎಂದು ಹೇಳಿಕೆಯು ತಿಳಿಸಿದೆ. ಬಂಧನಕ್ಕೂ ಮೊದಲು ಅಧಿಕಾರಿಗಳು ದೆಹಲಿ ಮತ್ತು ಹರಿಯಾಣದಲ್ಲಿ ಒಂಭತ್ತು ಕಡೆ ದಾಳಿ ನಡೆಸಿದ್ದರು.

ದಾಳಿಯ ವೇಳೆಗೆ ವಂಚನೆಗೆ ಸಂಬಂಧಿತ ದಾಖಲೆಗಳು, ಡಿಜಿಟಲ್‌ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ.  ಇ.ಡಿ ಈ ಸಂಬಂಧ ಸಿಬಿಐನ ಎಫ್‌ಐಆರ್‌ ಆಧರಿಸಿ ಪಿಎಂಎಲ್‌ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಶಕ್ತಿಭೋಗ್‌ ಫುಡ್ಸ್‌ ಲಿಮಿಟೆಡ್‌ ವಿರುದ್ಧ ₹ 3,269 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿ ಮೊಕದ್ದಮೆ ದಾಖಲಿಸಿತ್ತು.

24 ವರ್ಷದಷ್ಟು ಹಳೆಯದಾದ ಕಂಪನಿಯು ಆಹಾರ ಸಂಬಂಧಿತ ವಿವಿಧ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, 2008ರಲ್ಲಿ ₹ 1,411 ಕೋಟಿ ಮತ್ತು 2014ರಲ್ಲಿ ₹ 6,000 ಕೋಟಿ ವಹಿವಾಟು ನಡೆಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು