ಕೋಲ್ಕತ್ತಾ: ನಕಲಿ ಕೋವಿಡ್ ಲಸಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಬುಧವಾರದಂದು ಕೋಲ್ಕತ್ತಾದ 10 ಪ್ರದೇಶಗಳಲ್ಲಿ ದಾಳಿ ನಡೆಸಿದೆ.
ಕೋಲ್ಕತ್ತಾದ ವಿವಿಧ ಸ್ಥಳಗಳಿಗೆ ದಾಳಿ ನಡೆಸಲಾಗಿದೆ ಎಂಬುದನ್ನು ಇ.ಡಿ. ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್: ದೇಶದಲ್ಲಿ 41,965 ಹೊಸ ಪ್ರಕರಣಗಳು ಪತ್ತೆ; ಸಕ್ರಿಯ ಪ್ರಕರಣಗಳು ಏರಿಕೆ
ನಕಲಿ ವ್ಯಾಕ್ಸಿನೇಷನ್ ಕಾರ್ಯಾಚರಣೆಯಲ್ಲಿ ದೇಬಂಜನ್ ದೇಬ್‌ನನ್ನು ಕೋಲ್ಕತ್ತಾ ಪೊಲೀಸ್‌ನ ವಿಶೇಷ ತನಿಖಾ ತಂಡವು ಬಂಧಿಸಿತ್ತು.
ಜೂನ್ 26ರಂದು ಪಶ್ಚಿಮ ಬಂಗಾಳ ಸರ್ಕಾರವು ನಕಲಿ ಕೋವಿಡ್-19 ಲಸಿಕೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ಸದಸ್ಯರ ಪರಿಣಿತ ಸಮಿತಿಯನ್ನು ರಚಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.