ಬುಧವಾರ, ಅಕ್ಟೋಬರ್ 28, 2020
28 °C

ಡಿಎಂಕೆ ಸಂಸದನ ₹8.60 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) 1999ರ ನಿಯಮದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಒಪ್ಪಿಗೆ ಪಡೆಯದೇ ಅಕ್ರಮವಾಗಿ ಬಂಡವಾಳ ಹೂಡಿಕೆ (ಫಾರಿನ್‌ ಸೆಕ್ಯುರಿಟಿ) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಡಿಎಂಕೆ ಸಂಸದ ಗೌತಮ್‌ ಸಿಗಮಣಿ ಅವರ ₹8.60 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಗೌತಮ್‌, ಕಲ್ಲಕುರುಚ್ಚಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಎಫ್‌ಇಎಂಎಯ ಸೆಕ್ಷನ್‌ 37ಎಯಡಿ ಜಪ್ತಿ ಆದೇಶವನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಇ.ಡಿ ಉಲ್ಲೇಖಿಸಿದೆ. ‘ಜಕರ್ತಾದ ಪಿಟಿ ಎಕ್ಸೆಲ್‌ ಮೆಜಿಂಡೊದ 2.45 ಲಕ್ಷ ಷೇರುಗಳ ಖರೀದಿಗೆ ₹41.57 ಲಕ್ಷ ಹಾಗೂ ಯು.ಎ.ಇಯ ಎಂ.ಎಸ್‌.ಯುನಿವರ್ಸಲ್‌ ಬಿಜಿನೆಸ್‌ ವೆಂಚರ್ಸ್‌ನಲ್ಲಿ ₹22.86 ಲಕ್ಷ ಹೂಡಿಕೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

‘ಯುನಿವರ್ಸಲ್‌ ಬಿಜಿನೆಸ್‌ ವೆಂಚರ್ಸ್‌ನಿಂದ ಪಡೆದ ₹7.05 ಕೋಟಿ ಲಾಭವನ್ನು ಸ್ವದೇಶಕ್ಕೆ ತರದೆ ವಿದೇಶದಲ್ಲೇ ಇರಿಸಿಕೊಂಡಿದ್ದರು. ಇದೇ ಕಂಪನಿಯ ಖಾತೆಯಲ್ಲಿದ್ದ ₹90.20 ಲಕ್ಷವನ್ನೂ ಸ್ವದೇಶಕ್ಕೆ ತರದೇ ವಿದೇಶದಲ್ಲೇ ಇರಿಸಲಾಗಿತ್ತು. ತಮಿಳುನಾಡಿನಲ್ಲಿ ಇರುವ ಜಮೀನು, ವಾಣಿಜ್ಯ ಹಾಗೂ ವಸತಿ ಕಟ್ಟಡಗಳು ಸೇರಿದಂತೆ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ’ ಎಂದು ಇ.ಡಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು