ಶನಿವಾರ, ಮೇ 8, 2021
19 °C

ಸುಶೀಲ್‌ಚಂದ್ರ ಮುಂದಿನ ಮುಖ್ಯ ಚುನಾವಣಾ ಆಯುಕ್ತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸ್ತುತ ಚುನಾವಣಾ ಆಯುಕ್ತರಾಗಿರುವ ಸುಶೀಲ್‌ ಚಂದ್ರ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

ಚುನಾವಣಾ ಆಯೋಗದ ಅತ್ಯಂತ ಹಿರಿಯ ಆಯುಕ್ತರನ್ನೇ ಸಿಇಸಿ ಹುದ್ದೆಗೆ ನೇಮಕ ಮಾಡುವ ಪರಿಪಾಟ ಇದೆ. ಹೀಗಾಗಿ ಸುಶೀಲ್‌ ಚಂದ್ರ ಅವರನ್ನೆ ಸಿಇಸಿಯನ್ನಾಗಿ ನೇಮಕ ಮಾಡುವುದಕ್ಕೆ ಸರ್ಕಾರ ಹಸಿರುನಿಶಾನೆ ತೋರಿದೆ ಎನ್ನಲಾಗಿದೆ. ಯಾವುದೇ ಸಮಯದಲ್ಲಿ ಈ ಕುರಿತ ಆದೇಶ ಹೊರಬೀಳಲಿದೆ ಎಂದು ಇವೇ ಮೂಲಗಳು ಹೇಳಿವೆ.

ಮುಖ್ಯ ಚುನಾವಣಾ ಆಯುಕ್ತರಾಗಿರುವ ಸುನೀಲ್‌ ಅರೋರಾ ಅವರ ಅವಧಿ ಏಪ್ರಿಲ್‌ 13ರಂದು ಮುಗಿಯಲಿದ್ದು, ಅಂದೇ ಸುಶೀಲ್‌ ಚಂದ್ರ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು