ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ: ಮೊದಲು ದಮನಕಾರಿ ಪ್ರವೃತ್ತಿ ನಿಗ್ರಹಿಸಿ –ಮೆಹಬೂಬಾ

Last Updated 27 ಜೂನ್ 2021, 21:01 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪ್ರಮುಖ ನಾಯಕರ ಜೊತೆಗೆ ಚರ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗೆ ವಿಶ್ವಾಸಾರ್ಹತೆ ಬರಬೇಕಾದರೆ ಮೊದಲು ಅಲ್ಲಿರುವ ‘ನಿಗ್ರಹ ಮತ್ತು ದಮನಕಾರಿ ಯುಗ’ಕ್ಕೆ ಅಂತ್ಯವಾಡಬೇಕಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

‘ಇದಕ್ಕೆ ಪೂರಕವಾಗಿ ವಿರೋಧದ ಧ್ವನಿಗಳು ಎಂದಿಗೂ ಕ್ರಿಮಿನಲ್‌ ಕೃತ್ಯವಲ್ಲ ಎಂದು ಅರಿತುಕೊಳ್ಳಬೇಕಾಗಿದೆ. ಜನರಿಗೆ ಮುಕ್ತವಾಗಿ ಉಸಿರಾಡುವ ವಾತಾವರಣ ನಿರ್ಮಿಸಿ, ಉಳಿದದ್ದು ತಂತಾನೆ ಆಗುತ್ತದೆ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಮೆಹಬೂಬಾ ಪ್ರತಿಪಾದಿಸಿದರು.

ಈ ಮೊದಲು ರಾಜ್ಯವಾಗಿದ್ದು, ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಅಲ್ಲಿನ ಜನರ ನೋವುಗಳಿಗೆ ಅಂತ್ಯವಾಡುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ 14 ಸದಸ್ಯರ ನಿಯೋಗದ ಜೊತೆಗೆ ಚರ್ಚೆ ನಡೆಸುವ ಪ್ರಧಾನಿ ನಿರ್ಧಾರ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.

ಜನರಿಗೆ ಉಸಿರಾಡಲು ಅವಕಾಶ ನೀಡಿ ಎಂಬುದರ ಅರ್ಥ ಇಷ್ಟೇ. ಅಲ್ಲಿ ವಿರೋಧದ ಮಾತು ಆಡುವ ಯಾರನ್ನಾದರೂ ಬಂಧಿಸಲಾಗುತ್ತಿದೆ. ಕಾಶ್ಮೀರಿ ಸಲಹೆಗಾರರ ಮೇಲೆ ನಮಗೆ ವಿಶ್ವಾಸವಿದೆ ಎಂಬ ಭಾವನೆ ವ್ಯಕ್ತಪಡಿಸಿದರೂ ಬಂಧಿಸಲಾಗಿದೆ ಎಂದು ಮೆಹಬೂಬಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT