ಸೋಮವಾರ, ಜನವರಿ 24, 2022
20 °C

ಉತ್ತರ ಪ್ರದೇಶ: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಹಿಂದೂ ಧರ್ಮಕ್ಕೆ ಮತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಜಿಯಾಬಾದ್‌: ಉತ್ತರ ಪ್ರದೇಶದ ಶಿಯಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ವಸೀಂ ರಿಜ್ವಿ ಅವರು ಸೋಮವಾರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

ಜಿಲ್ಲೆಯ ದಸ್ನಾ ಪಟ್ಟಣದಲ್ಲಿರುವ ದಸ್ನಾ ದೇವಿ ಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ರಿಜ್ವಿ ಮಂತ್ರಗಳನ್ನು ಪಠಿಸಿದರು. ದೇವಾಲಯದ ಅರ್ಚಕ ಯತಿ ನರಸಿಂಗಾನಂದ ಸರಸ್ವತಿ ಅವರು ರಿಜ್ವಿ ಅವರಿಗೆ ಜಿತೇಂದ್ರ ನಾರಾಯಣ್ ಸಿಂಗ್‌ ತ್ಯಾಗಿ ಎಂದು ನಾಮಕರಣ ಮಾಡಿದರು. 

ಮುಸ್ಲಿಂ ಸಮುದಾಯದಿಂದ ತಮ್ಮನ್ನು ಹೊರಹಾಕಲಾಗಿತ್ತು ಮತ್ತು ತಾವು ಯಾವ ಧರ್ಮವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು ಎಂದು ದೇವಾಲಯದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ರಿಜ್ವಿ ತಿಳಿಸಿದರು.

'ಸನಾತನ ಧರ್ಮವೇ ಪ್ರಪಂಚದ ಶ್ರೇಷ್ಠ ಧರ್ಮ. ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಇಡುತ್ತಾರೆ' ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

1992ರ ಇದೇ ದಿನ (ಡಿ.6) ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು. ರಿಜ್ವಿ ಅವರು ಇದೇ ದಿನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಕುರಾನ್‌ನಲ್ಲಿರುವ 26 ಶ್ಲೋಕಗಳು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಅವುಗಳನ್ನು ತೆಗೆದುಹಾಕಬೇಕು ಎಂದು ಕೋರಿ ಈ ವರ್ಷದ ಆರಂಭದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದು ವಿವಾದ ಸೃಷ್ಟಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು