ಭಾನುವಾರ, ಜನವರಿ 17, 2021
22 °C

ರಾಷ್ಟ್ರ ರಾಜಧಾನಿಗೆ ಸಾವಿರಾರು ರೈತರ ಮುತ್ತಿಗೆ; 26ರಿಂದ ಅನಿರ್ಧಿಷ್ಟಾವಧಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ನೂತನವಾಗಿ ಜಾರಿಗೆ ತಂದಿರುವ ಸುಧಾರಣೆಗಳು ಹಾಗೂ ವಿದ್ಯುತ್‌ ಕಾಯ್ದೆಯನ್ನು ವಿರೋಧಿಸಿ, ರಾಷ್ಟ್ರದಾದ್ಯಂತದ ರೈತರು ‘ದಿಲ್ಲಿ ಚಲೋ’ ಹೆಸರಿನಲ್ಲಿ ದೆಹಲಿಯತ್ತ ಹೊರಟಿದ್ದು, ಗುರುವಾರದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಪಂಜಾಬ್‌, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನದಿಂದ ಟ್ರ್ಯಾಕ್ಟರ್‌ ಮುಖಾಂತರ ಸಾವಿರಾರು ರೈತರು ಹೊರಟಿದ್ದು, ಗುರುವಾರ ದೆಹಲಿ ತಲುಪಲಿದ್ದಾರೆ. ಅವರನ್ನು ದಾರಿ ಮಧ್ಯೆಯೇ ತಡೆದರೆ ಅಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಕ್ರಾಂತಿಕಾರಿ ಕಿಸಾನ್‌ ಸಂಘದ ಅಧ್ಯಕ್ಷ ದರ್ಶನ್‌ ಪಾಲ್‌ ಸಿಂಗ್‌ ತಿಳಿಸಿದರು. ರೈತರು ದೆಹಲಿ ತಲುಪದೇ ಇರಲು ಪಂಜಾಬ್‌ ಜೊತೆಗಿನ ಗಡಿಯನ್ನು ಹರಿಯಾಣ ರಾಜ್ಯ ಸರ್ಕಾರ ಮುಚ್ಚಿದೆ. ದೆಹಲಿಗೆ ತೆರಳುವ ಎಲ್ಲ 9 ಗಡಿಯ ಮುಖಾಂತರ ನಾವು ಪ್ರವೇಶಿಸಲಿದ್ದು, ತಡೆದರೆ ಅಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಸಿಂಗ್‌ ತಿಳಿಸಿದರು.

ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದಾಗಿ ರಾಮ್‌ಲೀಲಾ ಮೈದಾನದಲ್ಲಿ ರ್‍ಯಾಲಿ ನಡೆಸಲು ನೀಡಿದ್ದ ಒಪ್ಪಿಗೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದು, ಗರಿಷ್ಠ 100 ಜನರೊಂದಿಗೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಸೂಚಿಸಿದ್ದಾರೆ ಎಂದು ಕಿಸಾನ್‌ ಸಂಘರ್ಷ ಸಮಿತಿಯ ಸುನಿಲಾಮ್‌ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು