ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ: ಸಜಿ ಚೆರಿಯನ್ ವಿರುದ್ಧ ಎಫ್‌ಐಆರ್

Last Updated 7 ಜುಲೈ 2022, 9:23 IST
ಅಕ್ಷರ ಗಾತ್ರ

ಪತ್ತನಂತಿಟ್ಟ: ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆಕೇರಳದ ಸಿಪಿಐ(ಎಂ) ಶಾಸಕ ಸಜಿ ಚೆರಿಯನ್ ವಿರುದ್ಧ ಗುರುವಾರಎಫ್‌ಐಆರ್ ದಾಖಲಾಗಿದೆ.

ವಿರೋಧ ಪಕ್ಷ ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ವ್ಯಾಪಕ ಒತ್ತಡದಿಂದಾಗಿ ಸಜಿ ಚೆರಿಯನ್, ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪತ್ತನಂತಿಟ್ಟ ಜಿಲ್ಲೆಯ ನ್ಯಾಯಾಲಯದ ನಿರ್ದೇಶನದಂತೆ ಕೀಳ್‌ವೈಪುರ ಪೊಲೀಸ್ ಠಾಣೆಯಲ್ಲಿ, ಸೆಕ್ಷನ್ 2, 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ' ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕಾಯ್ದೆ ಪ್ರಕಾರ, ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಎಲ್‌ಡಿಎಫ್ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಮೊದಲ ಸಚಿವ ಚೆರಿಯನ್ ಆಗಿದ್ದಾರೆ.

'ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದ್ದು, ಸಂವಿಧಾನವನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿರಲಿಲ್ಲ' ಎಂದು ಚೆರಿಯನ್ ಸ್ಪಷ್ಟನೆ ನೀಡಿದ್ದರು.

ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿ ಎಂಬಲ್ಲಿ ಚೆರಿಯನ್, 'ಅದ್ಭುತವಾಗಿ ರಚಿಸಲಾದ ಸಂವಿಧಾನವನ್ನು ಭಾರತ ಹೊಂದಿದೆ ಎಂದು ನಾವು ಹೇಳುತ್ತೇವೆ. ಆದರೆ, ನನ್ನ ಪ್ರಕಾರ, ಅದ್ಭುತವಾದ ಈ ಸಂವಿಧಾನ ದೇಶದ ಬಹು ಜನರನ್ನು ಲೂಟಿ ಮಾಡಲು ನೆರವಾಗುವಂತಿದೆ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT