ಮಂಗಳವಾರ, ಮಾರ್ಚ್ 2, 2021
23 °C

ದೆಹಲಿ ಆಕಾಶವಾಣಿ ಭವನದಲ್ಲಿ ಬೆಂಕಿ: ಪ್ರಾಣಹಾನಿ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಲ್ಲಿನ ಆಕಾಶವಾಣಿ ಭವನದಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿಯ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್‌) ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಳಿಗ್ಗೆ 5.57ರ ಸುಮಾರಿಗೆ ಬೆಂಕಿ ಅವಘಡದ ಬಗ್ಗೆ ಕರೆ ಬಂದಿತು. ತಕ್ಷಣವೇ 8 ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಸದ್ಯ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ಡಿಎಫ್‌ಎಸ್‌ ನಿರ್ದೇಶಕ ಅತುಲ್‌ ಗರ್ಗ್‌ ಅವರು ಮಾಹಿತಿ ನೀಡಿದರು.

ಕೆಲವು ವಿದ್ಯುತ್‌ ಉಪಕರಣಗಳಿಂದಾಗಿ ಕೊಠಡಿ ಸಂಖ್ಯೆ 101ರಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದಾಗಿ ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು