ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್ 1ರಿಂದ ಪದವಿ, ಸ್ನಾತಕೋತ್ತರ ಪದವಿ ಕಾಲೇಜು ತರಗತಿ ಆರಂಭ

Last Updated 25 ಸೆಪ್ಟೆಂಬರ್ 2020, 11:03 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2020-21ರ ಶೈಕ್ಷಣಿಕ ವರ್ಷದ ತರಗತಿಗಳು ನವೆಂಬರ್ 1 ರಿಂದ ಪ್ರಾರಂಭವಾಗಲಿವೆ. 2020ರ ಅಕ್ಟೋಬರ್ ವೇಳೆಗೆ ಮೆರಿಟ್ / ಪ್ರವೇಶ ಆಧಾರಿತ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಹೀಗಿದ್ದರೂ, ಅರ್ಹತಾ ಪರೀಕ್ಷೆಗಳ ಫಲಿತಾಂಶ ಘೋಷಣೆಯಾಗುವುದು ವಿಳಂಬವಾದರೆ, ವಿಶ್ವವಿದ್ಯಾಲಯಗಳು ನವೆಂಬರ್ 18 ರಿಂದಲೇ ಶೈಕ್ಷಣಿಕ ವರ್ಷದ ತರಗತಿಗಳನ್ನು ಆರಂಭಿಸಬಹುದೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ಕುರಿತು ಕೇಂದ್ರದ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಟ್ವೀಟ್ ಮಾಡಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020-21ರ ಶೈಕ್ಷಣಿಕ ವರ್ಷಕ್ಕಾಗಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತು ಯುಜಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ಉಳಿದ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ನವೆಂಬರ್ 30 ಪ್ರವೇಶಕ್ಕೆ ಕೊನೆದಿನವಾಗಿರುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಪ್ರವೇಶ ಪರೀಕ್ಷೆಗಳ ಮೂಲಕವೇ ಪ್ರವೇಶ ಪಡೆಯುವ ಮತ್ತು ಅಗತ್ಯವಿರುವ ಕ್ರಮಗಳನ್ನು ಪೂರ್ಣಗೊಳಿಸಿದ ಅಥವಾ ಭವಿಷ್ಯದಲ್ಲಿ ಹಾಗೆ ಮಾಡುವ ಸಾಧ್ಯತೆ ಇರುವ ಸಂಸ್ಥೆಗಳು, ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ತರಗತಿಗಳನ್ನು ಆದಷ್ಟು ಬೇಗ ಪ್ರಾರಂಭಿಸಲು ನಿರ್ದೇಶಿಸಲಾಗಿದೆ.

ಇದಲ್ಲದೆ, 2021 ರ ಮಾರ್ಚ್ 8ರಿಂದ 26ರ ನಡುವೆ ಮೊದಲ ಸೆಮಿಸ್ಟರ್ / ವರ್ಷದ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. 2020-21 ಮತ್ತು 2021-22ರ ಶೈಕ್ಷಣಿಕ ವರ್ಷಗಳಿಗೆ ಆರು ದಿನಗಳ ವಾರದ ಮಾದರಿಯನ್ನು ಅನುಸರಿಸಲು ವಿಶ್ವವಿದ್ಯಾಲಯಗಳನ್ನು ಕೇಳಿದೆ, ಜೊತೆಗೆ ತರಗತಿಗಳ ನಷ್ಟವನ್ನು ಸರಿದೂಗಿಸಲು ವಿರಾಮಗಳನ್ನು ಕಡಿತಗೊಳಿಸಲು ಸೂಚಿಸಿದೆ.

ಈ ಶೈಕ್ಷಣಿಕ ವರ್ಷವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿರುವ ಯುಜಿಸಿ, ನವೆಂಬರ್ 30ರವರೆಗೆ ವಿದ್ಯಾರ್ಥಿಗಳ ಪ್ರವೇಶ ರದ್ದತಿ ಅಥವಾ ವಲಸೆಯ ಕಾರಣದಿಂದಾಗಿ ಪೋಷಕರಿಗೆ ಪ್ರವೇಶ ಶುಲ್ಕವನ್ನು ಸಂಪೂರ್ಣ ಮರುಪಾವತಿಸುವಂತೆ ಸಂಸ್ಥೆಗಳಿಗೆ ಆದೇಶಿಸಿದೆ. ಅಲ್ಲದೆ, ಡಿಸೆಂಬರ್ 31ರವರೆಗೆ ಪ್ರವೇಶ ರದ್ದತಿ / ವಾಪಸಾತಿ ಶುಲ್ಕವಾಗಿ ಸಂಸ್ಥೆಗಳು 1,000 ಕ್ಕಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಹೇಳಿದೆ.

ಇವುಗಳ ಹೊರತಾಗಿ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಡ್ಡಾಯ ಮಾರ್ಗಸೂಚಿಗಳನ್ನು ಅನುಸರಿಸಲು ಪ್ರತಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT