ಗುರುವಾರ , ಜನವರಿ 28, 2021
25 °C

ಐದು ಬಾರಿ ಸಂಸದರಾಗಿದ್ದ ಶಿವಸೇನೆಯ ಮೋಹನ ರಾವಲೆ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಶಿವಸೇನಾ ಮುಖಂಡ, ಐದು ಬಾರಿ ಸಂಸದರಾಗಿದ್ದ ಮೋಹನ ರಾವಲೆ (72) ಅವರು ಶನಿವಾರ ಗೋವಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರವನ್ನು ಅವರು ಐದು ಬಾರಿ ಪ್ರತಿನಿಧಿಸಿದ್ದರು.

‘ಮೋಹನ ರಾವಲೆ ಅವರು ನಿಧನರಾದರು. ಅವರು ನಿಜವಾದ ಶಿವಸೈನಿಕ ಹಾಗೂ ವಿಶಾಲ ಹೃದಯದ ಸ್ನೇಹಿತರಾಗಿದ್ದರು’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಟ್ವೀಟ್‌ ಮಾಡಿದ್ದಾರೆ.

ಕೆಲ ಭಿನ್ನಾಭಿಪ್ರಾಯಗಳ ಕಾರಣ 2013ರಲ್ಲಿ ಶಿವಸೇನೆ ತೊರೆದಿದ್ದ ಮೋಹನ್‌ ಅವರು ಬಳಿಕ ಮತ್ತೆ ಶಿವಸೇನೆ ಸೇರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು