ಶುಕ್ರವಾರ, ಸೆಪ್ಟೆಂಬರ್ 17, 2021
29 °C

ವೀಸಾ ಅವಧಿ ವಿಸ್ತರಣೆ: ನವಾಜ್ ಷರೀಫ್‌ ಅರ್ಜಿ ತಿರಸ್ಕರಿಸಿದ ಬ್ರಿಟನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌/ಲಂಡನ್ (ಪಿಟಿಐ): ವೀಸಾ ಅವಧಿ ವಿಸ್ತರಿಸಲು ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ನ ಗೃಹ ಸಚಿವಾಲಯ ತಿರಸ್ಕರಿಸಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

71 ವರ್ಷದ ನವಾಜ್‌ ಷರೀಫ್‌ ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್‌ ಅನುಮತಿ ನೀಡಿದ ನಂತರ, ನವೆಂಬರ್ 2019ರಿಂದಲೂ ಲಂಡನ್‌ನಲ್ಲೇ ನೆಲೆಸಿದ್ದಾರೆ.

ನವಾಜ್‌ ಷರೀಫ್‌ ಅವರ ವೀಸಾ ಅವಧಿ ವಿಸ್ತರಿಸಲಾಗದು ಎಂದು ಬ್ರಿಟನ್‌ನ ಗೃಹ ಸಚಿವಾಲಯ ತಿಳಿಸಿದೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್‌ (ಪಿಎಂಎಲ್‌–ಎನ್‌) ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್‌ ನ್ಯೂಸ್‌ ವರದಿ ಮಾಡಿದೆ.

ಗೃಹ ಸಚಿವಾಲಯದ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದು ಇತ್ಯರ್ಥವಾಗುವವರೆಗೂ ಷರೀಫ್‌ ಅವರು ಲಂಡನ್‌ನಲ್ಲೇ ನೆಲೆಸಲಿದ್ದಾರೆ ಎಂದು ಪಿಎಂಎಲ್‌–ಎನ್‌ ವಕ್ತಾರ ಔರಂಗಜೇಬ್‌ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು