ಶುಕ್ರವಾರ, ಜೂನ್ 25, 2021
29 °C

ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ: ವೆಂಟಿಲೇಟರ್‌ ಚಿಕಿತ್ಸೆ ಮುಂದುವರಿಕೆ

ಏಜೆನ್ಶೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್‌‌ ಮುಖರ್ಜಿ ಅವರಿಗೆ ವೆಂಟಿಲೇಟರ್‌ ನೆರವಿನಿಂದೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆಯ ವೈದ್ಯರು ಶನಿವಾರ ತಿಳಿಸಿದ್ದಾರೆ.

‘ಪ್ರಣವ್‌ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಈ ದಿನವೂ ಬದಲಾಗಿಲ್ಲ. ಆವರಿಗೆ ವೆಂಟಿಲೇಟರ್‌ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ತಜ್ಞರ ತಂಡವು ನಿಯಮಿತವಾಗಿ ಅವರ ಮೇಲ್ವಿಚಾರಣೆ ನಡೆಸುತ್ತಿದೆ’ ಎಂದು ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ.

ಪ್ರಣವ್‌ ಅವರು ವಿಧಿವಶರಾಗಿದ್ದಾರೆ ಎಂದು #ripPranabMukherjee ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಣವ್ ಪುತ್ರ ಅಭಿಜಿತ್ ಮುಖರ್ಜಿ, ‘ನನ್ನ ತಂದೆ  ಪ್ರಣವ್ ಮುಖರ್ಜಿ ಇನ್ನೂ ಜೀವಂತವಾಗಿದ್ದಾರೆ ಮತ್ತು ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೆಸರಾಂತ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿರುವ ಊಹಾಪೋಹಗಳು ಮತ್ತು ಸುಳ್ಳು ಸುದ್ದಿಗಳು ಭಾರತದಲ್ಲಿ ಮಾಧ್ಯಮವು ಸುಳ್ಳು ಸುದ್ದಿಗಳ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ’ ಎಂದು ಟ್ವೀಟ್ ಮಾಡಿದ್ದರು.

‘ದೇವರು ತಂದೆಗೆ ಒಳಿತು ಮಾಡಲಿ. ಏನೇ ಆದರೂ ಎದುರಿಸಲು ನನಗೆ ಶಕ್ತಿಯನ್ನು ನೀಡಲಿ’ ಎಂದು ಪುತ್ರಿ ಶರ್ಮಿಷ್ಠಾ ಮುಖರ್ಜಿ ಬುಧವಾರ ಟ್ವೀಟ್ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು