ಗುರುವಾರ , ಮಾರ್ಚ್ 23, 2023
22 °C

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಬೆದರಿಕೆಯನ್ನು ಮೆಟ್ಟಿ ನಿಲ್ಲಬೇಕು

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಮತ್ತು ಭೀತಿಗೊಳಿಸುವಂಥ ಆಕ್ರಮಣಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಬರಹಗಾರರು ಮೌನವಹಿಸಬಾರದು ಮತ್ತು ರಚನಾತ್ಮಕ ಅನ್ವೇಷಣೆಯಿಂದ ವಿಮುಖರಾಗಬಾರದು ಎಂದು ಕೇರಳದ ಪ್ರಮುಖ ಸಾಹಿತಿ ಎಂ.ಟಿ. ವಾಸುದೇವನ್‌ ನಾಯರ್‌ ಅವರು ಗುರುವಾರ ಹೇಳಿದರು.

ಇಲ್ಲಿ ನಡೆದ ಮಾತೃಭೂಮಿ ಇಂಟರ್‌ನ್ಯಾಷನಲ್ ಫೆಸ್ಟಿವಲ್‌ ಆಫ್‌ ಲೆಟರ್ಸ್‌ (ಎಂಬಿಐಎಫ್‌ಎಲ್‌ 2023) ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು ಹೀಗೆ ಹೇಳಿದರು. ‘ಭಿನ್ನಮತ ಹತ್ತಿಕ್ಕುವ ಕೆಲಸವನ್ನು ನಾವು ದೇಶದ ಎಲ್ಲೆಡೆ ನೋಡುತ್ತಿದ್ದೇವೆ. ಅಧಿಕಾರ ಕೇಂದ್ರಗಳೂ ಇದಕ್ಕೆ ಹೊರತಾಗಿಲ್ಲ. ಭಾರತದಲ್ಲಿ ಅಸಹಿಷ್ಣತೆ ಮತ್ತು ಹಿಂಸಾಚಾರದಿಂದ ಉಂಟಾಗಿರುವ ಸವಾಲುಗಳ ಜೊತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖಾಮುಖಿಯಾಗಿದೆ. ಸ್ವತಂತ್ರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನಾವು ಮೌನವಹಿಸಿದರೆ, ಆರಂಭಿಕ ಸೂಚನೆಯಂತೆ ಕಂಡಿರುವ ಸಮಸ್ಯೆಯು ಮುಂದೆ ನಮ್ಮನ್ನು ಗಂಭೀರ ಸಮಸ್ಯೆಗೆ ದೂಡುತ್ತದೆ’ ಎಂದು ಅವರು ಹೇಳಿದರು. 

ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ‘ಮಾತೃಭೂಮಿ’ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಈ ಬಾರಿಯ ಎಂಬಿಐಎಫ್‌ಎಲ್‌ ವಿಶೇಷವಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು