ಬುಧವಾರ, ಜನವರಿ 19, 2022
18 °C

ಗಾಲ್ವನ್ ಕಣಿವೆ ಹುತಾತ್ಮ ಕರ್ನಲ್ ಸಂತೋಷ್ ಬಾಬುಗೆ ‘ಮಹಾವೀರ ಚಕ್ರ’ ಪ್ರದಾನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾಗಿದ್ದ ಕರ್ನಲ್ ಸಂತೋಷ್ ಬಾಬು ಅವರಿಗೆ ಮಂಗಳವಾರ ಮರಣೋತ್ತರ ‘ಮಹಾವೀರ ಚಕ್ರ’ ಪ್ರದಾನ ಮಾಡಲಾಯಿತು.

ಸಂತೋಷ್ ಬಾಬು ಪರವಾಗಿ ಅವರ ತಾಯಿ ಹಾಗೂ ಪತ್ನಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ‘ಮಹಾವೀರ ಚಕ್ರ’ ಸ್ವೀಕರಿಸಿದರು.

ಕಳೆದ ವರ್ಷ ಜೂನ್‌ನಲ್ಲಿ ಲಡಾಖ್‌ನ ಪೂರ್ವಭಾಗದ ಗಾಲ್ವನ್‌ ಕಣಿವೆಯಲ್ಲಿ ಚೀನಾ ಯೋಧರ ಜತೆ ನಡೆಸಿದ್ದ ಸಂಘರ್ಷದಲ್ಲಿ ಬಾಬು ಹುತಾತ್ಮರಾಗಿದ್ದರು.

ಓದಿ: ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ನಡೆಯಿತು?

ತೆಲಂಗಾಣದ ಸೂರ್ಯಪೇಟೆಯವರಾದ ಬಾಬು ಅವರು 2004ರಲ್ಲಿ ಸೇನೆಗೆ ಸೇರಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ವೃತ್ತಿ ಆರಂಭಿಸಿದ್ದರು. ‘ಬಿಹಾರ–16’ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು