ಸೋಮವಾರ, ಸೆಪ್ಟೆಂಬರ್ 20, 2021
23 °C

ಲಸಿಕೆ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನೂ ಸುಲಭ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಇನ್ನುಮುಂದೆ ಒಂದೇ ಒಂದು ಸಂದೇಶ ಕಳುಹಿಸುವ ಮೂಲಕ ಲಸಿಕೆ ಪಡೆದಿದ್ದರ ಪ್ರಮಾಣ ಪತ್ರ ಪಡೆಯಬಹುದು ಎಂದು ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ.

ಲಸಿಕೆ ಪಡೆದವರು ವಾಟ್ಸಾಪ್‌ ಸಂಖ್ಯೆ +91-9013151515ಗೆ 'covid certificate' ಎಂದು ಸಂದೇಶ ಕಳುಹಿಸುವ ಮೂಲಕ MyGov ಕೊರೊನಾ ಸಹಾಯವಾಣಿಯಿಂದ ಪ್ರಮಾಣ ಪತ್ರವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ.

ವಾಟ್ಸಾಪ್‌ನಿಂದ ಸಂದೇಶ ಕಳುಹಿಸಿದ ಕೂಡಲೇ ಮೊಬೈಲ್‌ಗೆ ಒಟಿಪಿಯೊಂದು ಬರಲಿದೆ. ಒಟಿಪಿಯನ್ನು ನಮೂದಿಸಿದರೆ ಪ್ರಮಾಣ ಪತ್ರ ವಾಟ್ಸಾಪ್‌ಗೆ ಬಂದು ಬೀಳಲಿದೆ ಎಂದು ಮಾಂಡವೀಯ ಹೇಳಿದ್ದಾರೆ.

ಸದ್ಯ ದೇಶದಲ್ಲಿ 50 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು