ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಮ ಎಂದು ಕರೆದ ಜೈರಾಮ್‌ ರಮೇಶ್‌ಗೆ ₹2 ಕೋಟಿಯ ಮಾನನಷ್ಟ ನೋಟಿಸ್‌ ನೀಡಿದ ಆಜಾದ್‌

Last Updated 25 ಫೆಬ್ರುವರಿ 2023, 4:38 IST
ಅಕ್ಷರ ಗಾತ್ರ

ಶ್ರೀನಗರ: ‘ಗುಲಾಮ, ಮೀರ್ ಜಾಫರ್ ಮತ್ತು ವೋಟ್ ಕಟರ್’ ಎಂದು ಕರೆದಿದ್ದಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಆಜಾದ್ ಅವರ ಕಾನೂನು ಸಲಹೆಗಾರ ನರೇಶ್ ಕುಮಾರ್ ಗುಪ್ತಾ ಮೂಲಕ ಕಳುಹಿಸಲಾದ ನೋಟಿಸ್‌ನಲ್ಲಿ ಆಜಾದ್ ಅವರ ಕಳಂಕರಹಿತ ಪ್ರತಿಷ್ಠೆಗೆ ಹಾನಿ ಉಂಟು ಮಾಡಿದ್ದಕ್ಕಾಗಿ ₹2 ಕೋಟಿ ಪರಿಹಾರ ಕೋರಲಾಗಿದೆ.

‘ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ಪದೇ ಪದೇ ಪೋಸ್ಟ್‌ಗಳ ಮೂಲಕ ಅವರಿಗೆ (ಆಜಾದ್) ರಾಷ್ಟ್ರ ಮಟ್ಟದಲ್ಲಿ ಹೆಚ್ಚುತ್ತಿರುವ ಘನತೆ, ಗೌರವವನ್ನು ಹಾಳು ಮಾಡಲು ಮತ್ತು ಹಾನಿ ಮಾಡುವ ಸಂದರ್ಭವನ್ನು ಹುಡುಕುತ್ತಿರುತ್ತೀರಿ. ‘ಗುಲಾಂ’ ಎಂಬ ಪದವನ್ನು ‘ಗುಲಾಮ’ ಎಂಬ ಅರ್ಥದಲ್ಲಿ ರಮೇಶ್ ಬಳಸಿದ್ದಾರೆ’ ಎಂದು ಗುಪ್ತಾ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಜೈರಾಮ್ ರಮೇಶ್‌ ಅವರ ಹೇಳಿಕೆಯು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 500ರ ಅಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಹೀಗಾಗಿ ಅವರು ಹಣಕಾಸು ಪರಿಹಾರ ನೀಡಲು ಬಾಧ್ಯಸ್ಥರಾಗಿದ್ದಾರೆ ಎಂದು ಹೇಳಲಾಗಿದೆ.

ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಎರಡು ವಾರಗಳಲ್ಲಿ ಮಾಧ್ಯಮಗಳ ಮೂಲಕ ಆಜಾದ್ ಅವರ ಕ್ಷಮೆಯಾಚಿಸುವಂತೆ ರಮೇಶ್ ಅವರಿಗೆ ಗುಪ್ತಾ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT