ಭಾನುವಾರ, ಡಿಸೆಂಬರ್ 6, 2020
19 °C
ಇಂದು ಸಂಜೆ 5 ಗಂಟೆಗೆ ಸಮಯ ನಿಗದಿ

ರಾಷ್ಟ್ರಪತಿ ಭೇಟಿಯಾಗಲಿರುವ ಗುಲಾಂ‌ನಬಿ ಅಜಾದ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಮಸೂದೆಗಳು ಮತ್ತು ಎಂಟು ಸಂಸದರ ಅಮಾನತುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಮತ್ತು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಗುಲಾಂ ನಬಿ ಅಜಾದ್ ಅವರು ಬುಧವಾರ ಸಂಜೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ.

‘ರಾಷ್ಟ್ರಪತಿ ಅವರ ಭೇಟಿಗೆ ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿದೆ’ ಎಂದು ಆಜಾದ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ 16ಕ್ಕೂ ಹೆಚ್ಚು ಪಕ್ಷಗಳು ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದವು. 

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಂಗ್ರೆಸ್, ಟಿಎಂಸಿ, ಟಿಆರ್‌ಎಸ್‌ ಮತ್ತು ಡಿಎಂಕೆ ಪಕ್ಷಗಳ ಐವರು ಪ್ರತಿನಿಧಿಗಳು ರಾಷ್ಟ್ರಪತಿಯವರನ್ನು ಭೇಟಿಯಾಗಲು ಈ ಮೊದಲು ತೀರ್ಮಾನಿಸಿದ್ದವು.  ನಂತರ ಶಿವಸೇನಾ ಮತ್ತು ಎನ್‌ಸಿಪಿ ಪ್ರತಿನಿಧಿಗಳು ಈ ಭೇಟಿಯಲ್ಲಿ ಜತೆಯಾಗುವುದಾಗಿ ತಿಳಿದುಬಂದಿತ್ತು. ಅಂತಿಮವಾಗಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರೊಬ್ಬರನ್ನೇ ರಾಷ್ಟ್ರಪತಿಯವರ ಭೇಟಿಗೆ ಕಳುಹಿಸುವುದು ಸೂಕ್ತ ಎಂಬ ಒಮ್ಮತಕ್ಕೆ ಇತರ ವಿರೋಧ ಪಕ್ಷಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು