ಶನಿವಾರ, ಏಪ್ರಿಲ್ 1, 2023
31 °C

ಹುಟ್ಟುಹಬ್ಬಕ್ಕಾಗಿ ಪ್ರಿಯಕರನೊಂದಿಗೆ ಮನೆಯದ್ದೇ ಚಿನ್ನ ಕದ್ದು, ಕಥೆ ಹೆಣೆದಳು!

ಪಿಟಿಐ Updated:

ಅಕ್ಷರ ಗಾತ್ರ : | |

ಠಾಣೆ : ಗೆಳೆಯನ ಜೊತೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಮನೆಯದ್ದೇ ಚಿನ್ನಾಭರಣ ದೋಚಿ, ಕಥೆ ಕಟ್ಟಿದ್ದ ಯುವತಿ ಹಾಗೂ ಆತನ ಪ್ರಿಯಕರನನ್ನು ಇಲ್ಲಿನ ಕಪುರಬಾವಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಇಬ್ಬರ ಹುಟ್ಟು ಹಬ್ಬವನ್ನು ಒಟ್ಟಾಗಿ ಸಂಭ್ರಮಿಸಲು ನಿರ್ಧರಿಸಿದ್ದಾಳೆ. ಹಣಕ್ಕಾಗಿ ಆಕೆ ತನ್ನ ಕುಟುಂಬದ ಆಭರಣಗಳನ್ನೇ ಕದ್ದು ಪ್ರಿಯಕರನಿಗೆ ಹಸ್ತಾಂತರಿಸಿದ್ದಾಳೆ. ಮನೆಯಲ್ಲಿರುವವರನ್ನು ನಂಬಿಸಲು ಪ್ರಕರಣದಲ್ಲಿ ಮತ್ತೊಬ್ಬ ಅಪ್ರಾಪ್ತ ಹುಡುಗನನ್ನು ಕರೆತಂದಿದ್ದಾಳೆ. ಅಪ್ರಾಪ್ತ ಸ್ನೇಹಿತ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ಹೀಗಾಗಿ ಆಭರಣಗಳನ್ನು ಆತನಿಗೆ ನೀಡಿದ್ದೇನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಸಹಾಯಕ ಪೊಲೀಸ್ ಕಮಿಷನರ್ ನೀಲೇಶ್ ಸೋನಾವಾನೆ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. 

ಹದಿಹರೆಯದ ಯುವತಿ, ಅಪ್ರಾಪ್ತ ಬಾಲಕ ತನ್ನ ಪ್ರಿಯಕರನಾಗಿದ್ದು ಅಶ್ಲೀಲ ಚಿತ್ರಗಳನ್ನು ಕ್ಲಿಕ್ಕಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ನಗರದ ಕಪೂರ್‌ಬಾವಡಿ ಪೊಲೀಸರಿಗೆ ಜನವರಿ 7 ರಂದು ದೂರು ನೀಡಿದ್ದಳು. 

ಮನೆಯಲ್ಲಿನ ಚಿನ್ನಾಭರಣಗಳನ್ನು ಕದ್ದು ತನಗೆ ನೀಡುವಂತೆ ಒತ್ತಾಯಿಸಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಆಭರಣಗಳನ್ನು ಮಾರಾಟ ಮಾಡಿರುವುದಾಗಿ ಬಾಲಕ ಕೂಡ ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಅಂತಹ ಯಾವುದೇ ಆಭರಣ ಮಾರಾಟ ನಡೆದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. 

ಅನುಮಾನಗೊಂಡ ಪೊಲೀಸರು ಸಂಬಂಧಪಟ್ಟ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ತೆಗೆಸಿದ್ದಾರೆ. ಅದರಲ್ಲಿ ಅಪ್ರಾಪ್ತ ಬಾಲಕನ ಯಾವುದೇ ದೃಶ್ಯಗಳಿರಲಿಲ್ಲ. ಕೊನೆಗೆ ಯುವತಿ ತನ್ನ ನಿಜವಾದ ಪ್ರಿಯಕರನಿಗೆ ಆಭರಣ ನೀಡಿ, ಮಾರಾಟ ಮಾಡಿರುವ ಸತ್ಯ ಬೆಳಕಿಗೆ ಬಂದಿದೆ. ಮಾನ್ಪಾಡಾ ಪ್ರದೇಶದಲ್ಲಿ ₹53,000 ಕ್ಕೆ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾರೆ. ಮನೆಯವರಿಂದ ತಪ್ಪಿಸಿಕೊಳ್ಳಲು ಬ್ಲ್ಯಾಕ್‌ಮೇಲ್ ಕಥೆ ಹೆಣೆದಿದ್ದಾಳೆ.

ಸತ್ಯ ತಿಳಿಯುತ್ತಿದ್ದಂತೆ ಪೊಲೀಸರು ಆಕೆಯ ಪ್ರಿಯಕರ  ಮತ್ತು ಆಭರಣಗಳನ್ನು ಕದ್ದ ಮಾಲು ಎಂದು ಚೆನ್ನಾಗಿ ತಿಳಿದ ನಂತರವೂ ಖರೀದಿಸಿದ ಆಭರಣ ವ್ಯಾಪಾರಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್‌ 380 ಮತ್ತು 411 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಪುರಬಾವಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಉತ್ತಮ್ ಸೋನವನೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು