ಸೋಮವಾರ, ಜೂನ್ 21, 2021
27 °C

ತೌತೆ ಚಂಡಮಾರುತದಿಂದ ಹಾನಿ: ಇತರ ರಾಜ್ಯಗಳಿಗೂ ಪರಿಹಾರ ನೀಡಿ -ಸಂಜಯ್ ರಾವುತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತೌತೆ ಚಂಡಮಾರುತದಿಂದಾಗಿ ಮಹಾರಾಷ್ಟ್ರ, ಗೋವಾ ಸೇರಿದಂತೆ ಆರು ರಾಜ್ಯಗಳಲ್ಲಿ ಭಾರಿ ಹಾನಿ ಆಗಿದೆ. ಆದರೆ ಕೇಂದ್ರ ಸರ್ಕಾರವು ಗುಜರಾತ್‌ ರಾಜ್ಯಕ್ಕೆ ಮಾತ್ರ ಆರ್ಥಿಕ ನೆರವನ್ನು ಘೋಷಿಸಿದೆ ಎಂದು ಎನ್‌ಸಿಪಿ ಆಕ್ಷೇಪಿಸಿದೆ.

ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಕೂಡ ಪ್ರಧಾನಿ ಅವರು ಶೀಘ್ರವೇ ನೆರವು ಪ್ರಕಟಿಸಲಿದ್ದಾರೆ ಎಂದು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಶಿವಸೇನಾ ವಿಶ್ವಾಸ ವ್ಯಕ್ತಪಡಿಸಿದೆ.

ಬಿಜೆಪಿ ನಾಯಕ ದೇವೇಂದ್ರ ಘಡಣವೀಸ್‌ ಅವರು, ಚಂಡಮಾರುತದಿಂದ ಹಾನಿಗೊಳಗಾದ ಎಲ್ಲ ರಾಜ್ಯಗಳಿಗೆ ಪ್ರಧಾನಿ ಮೋದಿ ಅವರು ನೆರವು ಪ್ರಕಟಿಸುವುದಾಗಿ ಹೇಳಿದ್ದಾರೆ ಎಂದರು.

ಪ್ರಧಾನಿ ಅವರು ಗುಜರಾತ್‌ಗೆ ಭೇಟಿ ನೀಡಿದ ವಿಷಯವನ್ನು ಮಹಾ ವಿಕಾಸ್‌ ಅಘಾಡಿ ಸರ್ಕಾರವು ಉದ್ದೇಶಪೂರ್ವಕವಾಗಿಯೇ ವಿವಾದವಾಗಿ ಮಾಡಲು ಹೊರಟಿದೆ ಎಂದು ಫಡಣವೀಸ್‌ ಆರೋಪಿಸಿದರು.

ಶಿವಸೇನಾ ಸಂಸದ ಸಂಜಯ್ ರಾವುತ್‌ ಅವರು, ಗುಜರಾತ್‌ಗೆ ₹ 1,000 ಕೋಟಿ ನೆರವು ಘೋಷಿಸಿದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಗುಜರಾತ್‌ ಕೂಡ ಭಾರತಕ್ಕೇ ಸೇರಿದೆ ಅಲ್ಲದೆ ಚಂಡಮಾರುತದಿಂದ ತೊಂದರೆಗೆ ಒಳಗಾಗಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಉದ್ಧವ್‌ ಅವರು ರಾಜ್ಯದಲ್ಲಿ ತೊಂದರೆಗೆ ಒಳಗಾಗಿರುವ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡುವರು. ಯಾವ ರೀತಿಯ ನೆರವು ಬೇಕು ಎಂಬ ಬಗ್ಗೆ ವಿವರವಾಗಿ ಮನವಿ ಸಿದ್ಧಪಡಿಸಲಾಗಿದೆ. ಕೇಂದ್ರ ಸರ್ಕಾರವು ಮಹಾರಾಷ್ಟ್ರಕ್ಕೆ ₹ 1,500 ಮತ್ತು ಗೋವಾಕ್ಕೆ ₹ 500 ಕೋಟಿ ನೆರವು ಪ್ರಕಟಿಸುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು