ಮಂಗಳವಾರ, ಜೂನ್ 22, 2021
24 °C
ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌: ಹಳ್ಳಿಗಳಲ್ಲಿ ಆರೈಕೆ ಕೇಂದ್ರ ಸ್ಥಾಪಿಸಲು ಸೂಚನೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕು ಪ್ರಸರಣ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಭಾನುವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಧುಮೇಹ, ಅಧಿಕ ರಕ್ತದೊತ್ತಡದಂತಹ ಇತರ ತೊಂದರೆಗಳಿರುವವರು ಲಕ್ಷಣ ರಹಿತ ಕೋವಿಡ್‌–19 ಪೀಡಿತರಾದವರಿಗೆ, ಸೌಮ್ಯ ಲಕ್ಷಣಗಳಿರುವವರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ಇರದಿದ್ದರೆ, ಅಂಥವರಿಗಾಗಿ ಗ್ರಾಮೀಣ ಪ್ರದೇಶ, ಪಟ್ಟಣಗಳಲ್ಲಿ ಕನಿಷ್ಠ 30 ಹಾಸಿಗೆಗಳುಳ್ಳ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದೆ.

ಎಲ್ಲ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಕೋವಿಡ್‌–19 ದೃಢಪಟ್ಟವರು ಹಾಗೂ ಶಂಕಿತ ವ್ಯಕ್ತಿಗಳನ್ನು ಒಂದೇ ಕಡೆ ದಾಖಲಿಸಿ, ಚಿಕಿತ್ಸೆ ನೀಡಬಾರದು ಎಂದೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ– ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮ್​​​ಡಿಸಿವಿರ್ ಹಂಚಿಕೆ: ಡಿ.ವಿ. ಸದಾನಂದಗೌಡ

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ವವರನ್ನು ಸಾಧ್ಯವಾದಷ್ಟು ಪತ್ತೆ ಮಾಡಬೇಕು. ಕೋವಿಡ್‌–19 ದೃಢಪಟ್ಟವರಲ್ಲಿ ಆಮ್ಲಜನಕ ಮಟ್ಟದ ಮೇಲೆ ನಿಗಾ ಇಡುವುದು ಮುಖ್ಯ. ಹೀಗಾಗಿ ಪ್ರತಿಯೊಂದು ಗ್ರಾಮಕ್ಕೆ ಸಾಕಷ್ಟು ಸಂಖ್ಯೆಯ ಪಲ್ಸ್‌ ಆಕ್ಸಿಮೀಟರ್, ಉಷ್ಣತಾಮಾಪಕಗಳನ್ನು  ಒದಗಿಸುವುದು  ಅಗತ್ಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು