ನವದೆಹಲಿ: ‘ತ್ವರಿತಗತಿಯಲ್ಲಿ ವಿತರಿಸುವ ಹಾಗೂ ದಾಸ್ತಾನು ತೆರವುಗೊಳಿಸುವ ಸಂಬಂಧ ಯಾವುದೇ ಮಿತಿ ಮೌಲ್ಯವಿಲ್ಲದೇ ಕೋವಿಡ್ 19‘ ಲಸಿಕೆಯನ್ನು ಆಮದು ಮತ್ತು ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ.

ಎಕ್ಸ್‌ಪ್ರೆಸ್ ಕಾರ್ಗೊ ಕ್ಲಿಯರೆನ್ಸ್ ಸಿಸ್ಟಮ್ (ಇಸಿಸಿಎಸ್) ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಕೊರಿಯರ್ ಮೂಲಕ ‘ಕೋವಿಡ್19‘ ಲಸಿಕೆಗಳನ್ನು ಆಮದು / ರಫ್ತು ಮಾಡಲು ಅನುಕೂಲವಾಗುವಂತೆ ದಿ ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್ (ಸಿಬಿಐಸಿ) ನಿಯಮಗಳನ್ನು ತಿದ್ದುಪಡಿ ಮಾಡಿದೆ.

‘ಮೌಲ್ಯ ಮಿತಿ ಇಲ್ಲದೇ, ಕೋವಿಡ್‌ಗೆ ಸಂಬಂಧಿಸಿದ ಲಸಿಕೆಗಳನ್ನು ಆಮದು ಮತ್ತು ರಫ್ತು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ‘ ಎಂದು ತಿದ್ದುಪಡಿ ಮಾಡಿದ ‘ಕೊರಿಯರ್ ಆಮದು ಮತ್ತು ರಫ್ತು (ಎಲೆಕ್ಟ್ರಾನಿಕ್ ಘೋಷಣೆ ಅಂಡ್ ಸಂಸ್ಕರಣೆ) ತಿದ್ದುಪಡಿ ನಿಯಮಗಳು 2020‘ ದಲ್ಲಿ ಹೇಳಲಾಗಿದೆ.

ಕೋವಿಡ್ 19, ವಿಶ್ವದಾದ್ಯಂತ ಕಸ್ಟಮ್ಸ್ ಮತ್ತು ಇತರ ಆಡಳಿತಗಳಿಗೆ ಬೃಹತ್ ಸವಾಲುಗಳನ್ನು ಒಡ್ಡಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಲಸಿಕೆಗಳ ಪರಿಣಾಮಕಾರಿ ತೆರವು ಮತ್ತು ವಿತರಣೆ ನಿರ್ಣಾಯಕ ಅವಶ್ಯಕತೆಯಾಗಿದೆ‘ ಎಂದು ಸಿಬಿಐಸಿ ಹೇಳಿದೆ.

‘ಲಸಿಕೆಗಳನ್ನು ನಿಯಂತ್ರಿತ ತಾಪಮಾನದಲ್ಲಿ ಸಂಗ್ರಹಿಸಿ ಸಾಗಿಸಬೇಕಾಗಿರುವುದು ಮತ್ತು ಈ ಪ್ರಕ್ರಿಯೆಯಲ್ಲಿ ಅನೇಕ ಪಾಲುದಾರರು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಲಸಿಕೆಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಪರಿಣಾಮಕಾರಿಯಾದ ಗಡಿಯಾಚೆಗಿನ ಕಾರ್ಯವಿಧಾನಗಳನ್ನು ಜಾರಿಗೆ ತರಲು ಇದು ಅಗತ್ಯವಾಗಿರುತ್ತದೆ‘ ಎಂದು ಸಿಬಿಐಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.