ಬುಧವಾರ, ಮಾರ್ಚ್ 29, 2023
27 °C

ಪಾಕಿಸ್ತಾನ ಮೂಲದ ಒಟಿಟಿ Vidly TVಯನ್ನು ನಿರ್ಬಂಧಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನ ಮೂಲದ ಒಟಿಟಿ Vidly TVಯ ವೆಬ್‌ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರವು ಸೋಮವಾರ ಆದೇಶಿಸಿದೆ.

ಒಟಿಟಿಯಲ್ಲಿ ತೋರಿಸುತ್ತಿರುವ ವೆಬ್‌ ಸರಣಿಯು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡಿದೆ ಎಂದು ಸರ್ಕಾರ ಹೇಳಿದೆ.

26/11ರ ಮುಂಬೈ ದಾಳಿಯ ದಿನದಂದು ಒಟಿಟಿ ವೇದಿಕೆ ‘Vidly TV’ಯು ‘ಸೇವಕ್: ದಿ ಕನ್ಫೆಷನ್ಸ್’ ಎಂಬ ವೆಬ್ ಸರಣಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ವೆಬ್ ಸರಣಿಯ ಮೂರು ಸಂಚಿಕೆಗಳು ಇಲ್ಲಿಯವರೆಗೆ ಬಿಡುಗಡೆಯಾಗಿವೆ ಎಂದು ಅದು ಹೇಳಿದೆ.
ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿಯುಳ್ಳ ವೆಬ್-ಸರಣಿ ‘ಸೇವಕ್‘ ಅನ್ನು ಪಾಕಿಸ್ತಾನದ 'ಇನ್ಫೋ ಆಪ್ಸ್' ಪ್ರಾಯೋಜಿಸಿದೆ. ಇದರ ಮೌಲ್ಯಮಾಪನದ ನಂತರ Vidly TVಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಐತಿಹಾಸಿಕ ಸೂಕ್ಷ್ಮ ಘಟನೆಗಳು ಮತ್ತು ರಾಷ್ಟ್ರೀಯ ಘನತೆಗೆ ಸಂಬಂಧಿಸಿದ ‘ಆಪರೇಷನ್ ಬ್ಲೂ ಸ್ಟಾರ್’ ಮತ್ತು ಅದರ ನಂತರದ ಘಟನೆಗಳು, ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ, ‘ಗ್ರಹಾಂ ಸ್ಟೇನ್ಸ್’ ಎಂಬ ಕ್ರೈಸ್ತ ಮಿಷನರಿಯ ಹತ್ಯೆ, ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್‌, ಸಟ್ಲೆಜ್–ಯಮುನಾ ಕಾಲುವೆಗೆ ಸಂಬಂಧಿಸಿದ ಅಂತರ-ರಾಜ್ಯ ನದಿ ನೀರಿನ ವಿವಾದಗಳ ಬಗ್ಗೆ ಭಾರತ ವಿರೋಧಿ ನಿರೂಪಣೆಯನ್ನು ವೆಬ್-ಸರಣಿಯಲ್ಲಿ ಚಿತ್ರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು