ಸೋಮವಾರ, ಏಪ್ರಿಲ್ 19, 2021
28 °C

ನೇಪಾಳ, ಭೂತಾನ್ ಗಡಿ ಭದ್ರತೆಗಾಗಿ 12 ಹೊಸ ಎಸ್‌ಎಸ್‌ಬಿ ಬೆಟಾಲಿಯನ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನೇಪಾಳ ಮತ್ತು ಭೂತಾನ್ ಗಡಿ ಕಾವಲು ಪಡೆಯನ್ನು ಬಲಪಡಿಸಲುವ ಸಲುವಾಗಿ 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ 12 ಹೊಸ ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ಬಲ) ಬೆಟಾಲಿಯನ್‌ಗಳನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ಬೆಟಾಲಿಯನ್‌ಗಳು ಭೂತಾನ್ ಮತ್ತು ಟಿಬೆಟ್‌ಗೆ ಹೊಂದಿಕೊಂಡಿರುವ ಸಿಕ್ಕಿಂನ ತ್ರಿ–ಜಂಕ್ಷನ್ ಪ್ರದೇಶ ಸೇರಿದಂತೆ ಈ ಭಾಗಗಳಲ್ಲಿ ರಕ್ಷಣೆಯನ್ನು ಬಲಪಡಿಸಲಿವೆ. ಗಡಿ ಪಡೆಗೆ ಹೊಸ ಕ್ಷೇತ್ರ ಗಡಿಯನ್ನು ರಚಿಸುವುದಕ್ಕೆ ಕೇಂದ್ರ ಗೃಹ ಸಚಿವಾಲಯವು ನಿರಾಕರಿಸಿದೆಯಾದರೂ, ಎಸ್‌ಎಸ್‌ಬಿಗೆ ಮೂರು ಹೊಸ ವಲಯಗಳಲ್ಲಿ ಒಂದನ್ನು ರಚಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ನಾಲ್ಕು ವರ್ಷಗಳಲ್ಲಿ 12 ಹೊಸ ಬೆಟಾಲಿಯನ್‌ಗಳನ್ನು ಹಂತಹಂತವಾಗಿ ತಲಾ ಮೂರು ಘಟಕಗಳನ್ನಾಗಿ ಹೆಚ್ಚಿಸಲಾಗುವುದು ಎಂದು ಎಸ್‌ಎಸ್‌ಬಿಯ ಮಹಾ ನಿರ್ದೇಶಕ (ಡಿಜಿ) ಕುಮಾರ್ ರಾಜೇಂದ್ರ ಚಂದ್ರ ಅವರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು