ನವದೆಹಲಿ: ಪ್ರತಿಯೊಬ್ಬರಿಗೂ ಅಗ್ಗದ ದರಕ್ಕೆ ಗುಣಮಟ್ಟದ ಔಷಧ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ 2024ರಮಾರ್ಚ್ ವೇಳೆಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು 10,000ಕ್ಕೆ ಹೆಚ್ಜಿಸಲು ಯೋಜನೆ ರೂಪಿಸಲಾಗಿದೆ ಎಂದುಸರ್ಕಾರ ಶನಿವಾರ ತಿಳಿಸಿದೆ.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮೂಲಕ ಸುಮಾರು ₹18,000 ಕೋಟಿ ಉಳಿತಾಯ ಮಾಡಲಾಗಿದೆ. 743 ಜಿಲ್ಲೆಗಳಲ್ಲಿರುವ 9,000ಕ್ಕೂ ಹೆಚ್ಚು ಜೆನರಿಕ್ ಔಷಧ ಕೇಂದ್ರಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಚಿಂತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
2021–22ರಲ್ಲಿ ಜನೌಷಧಿ ಕೇಂದ್ರಗಳಲ್ಲಿ ₹893.56 ಕೋಟಿ ಮೌಲ್ಯದ ಔಷಧ ಮಾರಾಟವಾಗಿದೆ. ಇದರಿಂದ ನಾಗರಿಕರಿಗೆ ₹5,300 ಕೋಟಿ ಉಳಿತಾಯವಾಗಿದೆ. 2022–23ನೇ ಸಾಲಿನಲ್ಲಿ ನವೆಂಬರ್ ವರೆಗೆ ₹758.69 ಕೋಟಿ ಮೌಲ್ಯದ ಔಷಧ ಮಾರಾಟವಾಗಿದೆ. ಇದರಿಂದ ಅಂದಾಜು ₹4,500 ಕೋಟಿ ಉಳಿತಾಯವಾಗಿದೆ ಎಂದು ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.