ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ

ನವದೆಹಲಿ: ಟೂಲ್ಕಿಟ್ ಪ್ರಕರಣದಲ್ಲಿ ಸಿಲುಕಿ ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪರಿಸರ ಹೋರಾಗಾರ್ತಿ ಬೆಂಗಳೂರಿನ ದಿಶಾ ರವಿ ಅವರಿಗೆ ಅಂತರರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ದಿಶಾ ಪ್ರಕರಣ ಕುರಿತ ಕೆಲ ಮಾಧ್ಯಮಗಳ ವರದಿ ವೈಭವೀಕೃತ, ಪೂರ್ವಾಗ್ರಹಪೀಡಿತ: ಕೋರ್ಟ್
ದಿಶಾ ಅವರ ಐದು ದಿನಗಳ ಕಸ್ಟಡಿ ಅವಧಿ ಶುಕ್ರವಾರ ಮುಗಿದ ಹಿನ್ನೆಲೆಯಲ್ಲಿ ಅವರಿಗೆ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಪಟಿಯಾಲ ಹೌಸ್ ನ್ಯಾಯಾಲಯ ಆದೇಶಿಸಿತು. ಇದೇ ಬೆನ್ನಿಗೇ ಗ್ರೆಟಾ ಥನ್ಬರ್ಗ್ ದಿಶಾಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Freedom of speech and the right to peaceful protest and assembly are non-negotiable human rights. These must be a fundamental part of any democracy. #StandWithDishaRavi https://t.co/fhM4Cf1jf1
— Greta Thunberg (@GretaThunberg) February 19, 2021
'ವಾಕ್ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆ ಮತ್ತು ಸಭೆ ಸೇರುವ ಹಕ್ಕು ಚೌಕಾಸಿ ಇಲ್ಲದ ಮಾನವ ಹಕ್ಕುಗಳಾಗಿವೆ. ಇವು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿರಬೇಕು,' ಎಂದು ಗ್ರೆಟಾ ಪ್ರತಿಪಾದಿಸಿದ್ದಾರೆ. ಅಲ್ಲದೆ, ಈ ಟ್ವೀಟ್ ನೊಂದಿಗೆ ಗ್ರೆಟಾ ಅವರು #StandWithDishaRavi ಎಂಬ ಹ್ಯಾಷ್ ಟ್ಯಾಗ್ ಅನ್ನೂ ಬಳಸಿದ್ದಾರೆ.
ಇದನ್ನೂ ಓದಿ: ಟೂಲ್ಕಿಟ್ ಪ್ರಕರಣ: ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.