ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷದ್ವೀಪ: ಎಲ್‌ಡಿಆರ್ ಪ್ರಸ್ತಾವನೆ ರದ್ದತಿಗೆ ಒತ್ತಾಯಿಸಿ ವಿಜ್ಞಾನಿಗಳಿಂದ ಪತ್ರ

ರಾಷ್ಟ್ರಪತಿಗೆ ಪತ್ರ
Last Updated 24 ಜೂನ್ 2021, 10:06 IST
ಅಕ್ಷರ ಗಾತ್ರ

ಕೊಚ್ಚಿ: ‘ಲಕ್ಷದ್ವೀಪದ ಪರಿಸರ ವ್ಯವಸ್ಥೆ, ಸಂಸ್ಕೃತಿಯ ಅಸ್ಮಿತೆ ಮತ್ತು ಜೀವನೋಪಾಯಕ್ಕೆ ಧಕ್ಕೆಯಾಗುವಂತಹ ಅಂಶಗಳಿರುವ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ–2021(ಎಲ್‌ಡಿಎಆರ್‌) ಪ್ರಸ್ತಾವನೆ ರದ್ದುಗೊಳಿಸಲು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಲಕ್ಷದ್ವೀಪದ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ವಿಜ್ಞಾನಿಗಳ ಗುಂಪೊಂದು ಪತ್ರ ಬರೆದಿದೆ.

ಲಕ್ಷದ್ವೀಪ ರೀಸರ್ಚ್‌ ಕಲೆಕ್ಟಿವ್‌ ಗುಂಪಿನ ಈ ವಿಜ್ಞಾನಿಗಳು ತಂಡ ಈ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ಎಲ್‌ಡಿಎಆರ್‌ ಪ್ರಸ್ತಾವನೆಯಲ್ಲಿರುವ ಅನೇಕ ಅಂಶಗಳು ಲಕ್ಷದ್ವೀಪದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಾನೂನು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಲಕ್ಷದ್ವೀಪದ ಪರಿಸರ ವ್ಯವಸ್ಥೆ, ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತವೆ‘ ಎಂದು ತಿಳಿಸಿದೆ.

ಇಂಥ ಅಜಾಗರೂಕತೆಯಿಂದ ಕೂಡಿರುವ ಕರಡು ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಲಕ್ಷದ್ವೀಪದ 60 ಮಂದಿ ವಿಜ್ಞಾನಿಗಳು ಸಹಿ ಹಾಕಿರುವ ಪತ್ರವನ್ನು ‌ರಾಷ್ಟ್ರಪ‍ತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT