ಗುರುವಾರ , ಡಿಸೆಂಬರ್ 3, 2020
20 °C

ಗುಜರಾತ್‌ ಉಪಚುನಾವಣೆ: ಎಲ್ಲಾ 8 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಉ‍ಪಚುನಾವಣೆಗಳ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಆಡಳಿತರೂಢ ಬಿಜೆಪಿಯು ಎಲ್ಲಾ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಲಿಂಬ್ಡಿ, ಅಬ್ಡಾಸ, ಕಪ್ರಾದ, ಡಂಗ್‌, ಕರ್ಜನ್‌ ಕ್ಷೇತ್ರದಲ್ಲಿ ಬಿಜೆಪಿಯು ಕಾಂಗ್ರೆಸ್‌ನಿಂದ ಗಮನಾರ್ಹ ಮತಗಳ ಅಂತರದಿಂದ ಮುಂದಿದೆ. ಮತ ಎಣಿಕೆ ಆರಂಭದಲ್ಲಿ ಮೊರ್ಬಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಜಯಂತಿಲಾಲ್‌ ಪಟೇಲ್‌ ಅವರನ್ನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಮಿರ್ಜಾ ಅವರು 1,000 ಮತಗಳ ಅಂತರದಿಂದ  ಹಿಂದಿಕ್ಕಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳ ಮೂಲಕ ತಿಳಿದು ಬಂದಿದೆ.

ಬಿಜೆಪಿಯು ಆರಂಭದಿಂದಲೇ ಏಳು ಕ್ಷೇತ್ರಗಳಲ್ಲಿ ಸ್ಥಿರ ಮುನ್ನಡೆ ಕಾಯ್ದುಕೊಂಡಿದೆ. ಅಲ್ಲದೇ ಲಿಂಬ್ಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃತಿಸಿನ್ಹಾ ಅವರು 22,000 ಮತಗಳಿಂದ ಮುಂದಿದ್ದಾರೆ. ಅಬ್ಡಾಸದಲ್ಲಿ ಬಿಜೆಪಿಯ ಪ್ರದ್ಯುಮ್ನ ಸಿಂಗ್ ಜಡೇಜಾ ಅವರು 16,000 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ.

ಬಿಜೆಪಿಯ ಜೀತು ಚೌಧರಿ ಮತ್ತು ವಿಜಯ್ ಪಟೇಲ್ ಕ್ರಮವಾಗಿ ಕಪ್ರಡಾ ಮತ್ತು ಡಾಂಗ್‌ನಲ್ಲಿ ಕಾಂಗ್ರೆಸ್‌ನಿಂದ ತಲಾ 14,000 ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ. ಕರ್ಜನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಷಯ್‌ ಪಟೇಲ್‌ 9,900 ಮತಗಳಿಂದ ಮುಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು