ಗುರುವಾರ , ಡಿಸೆಂಬರ್ 1, 2022
25 °C

ಸರ್ಕಾರಿ ದಾವೆಗೆ ಕಡಿವಾಣ ಬಿದ್ದರೆ ನ್ಯಾಯಾಂಗದ ಅರ್ಧ ಸಮಸ್ಯೆ ಬಗೆಹರಿದಂತೆ: ರಮಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ‘ಸರ್ಕಾರಿ ಪ್ರಾಯೋಜಿತ ಮೊಕದ್ದಮೆಗಳಿಗೆ ಸರ್ಕಾರವು ಕಡಿವಾಣ ಹಾಕಿದರೆ ನ್ಯಾಯಾಂಗದ ಅರ್ಧ ಸಮಸ್ಯೆ ಬಗೆಹರಿಯುತ್ತದೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದ್ದಾರೆ.

‘ಐಎಸ್‌ಬಿ ಲೀಡರ್‌ಷಿಪ್‌ ಸಮ್ಮೇಳನ–2022’ರಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೂಡ ನ್ಯಾಯಾಂಗ ವ್ಯವಸ್ಥೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ರಾಷ್ಟ್ರಮಟ್ಟದ ಅಧ್ಯಯನದಿಂದ ಇದು ತಿಳಿದುಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನ್ಯಾಯಾಂಗದ ಪಾಲಿಗೆ ಸರ್ಕಾರವೇ ದೊಡ್ಡ ದಾವೆಗಾರ. ಅಂತರ ವಿಭಾಗೀಯ ವ್ಯಾಜ್ಯಗಳು, ಸೇವಾ ವಿಚಾರಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವುದೇ ದೊಡ್ಡ ಸಮಸ್ಯೆಯಾಗಿದೆ’ ಎಂದಿದ್ದಾರೆ.

ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತಾಗಬೇಕು (ನವದೆಹಲಿ ವರದಿ): ‘ಅಂಗವಿಕಲರಿಗೆ ನ್ಯಾಯಾಂಗ ಸೇವೆಯು ಸುಲಭವಾಗಿ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ನ ಇ–ಸಮಿತಿಯು ಡಿಜಿಟಲ್‌ ಮೂಲಸೌಕರ್ಯ ರೂಪಿಸಲು ಮುಂದಾಗಿದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಶನಿವಾರ ತಿಳಿಸಿದ್ದಾರೆ.

‘ಅಗತ್ಯ ಕಾನೂನು ಇದ್ದರೂ ಕೂಡ ಕೆಲ ಸರ್ಕಾರಿ–ಖಾಸಗಿ ಕಚೇರಿಗಳು, ಸಾರಿಗೆ ಸೇವೆ, ಉದ್ಯಾನಗಳು ಹಾಗೂ ಇತರೆ ಸ್ಥಳಗಳು ಅಂಗವಿಕಲರಿಗೆ ಮುಕ್ತವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು