ಸೋಮವಾರ, ಜುಲೈ 4, 2022
23 °C

ಹಾಥರಸ್ ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆಗೆ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಹಾಥರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ಕುಟುಂಬ ಸದಸ್ಯರಿಗೆ ನೀಡಿದ್ದ ಸಿಆರ್‌ಪಿಎಫ್‌ ಭದ್ರತೆ ಹಿಂತೆಗೆದುಕೊಂಡ ನಂತರ, ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ನಾಗರಿಕ ಹಕ್ಕು ಸಂಘಟನೆಗಳು ತಿಳಿಸಿವೆ.

ನಾಗರಿಕ ಸ್ವಾತಂತ್ರ್ಯ ಕುರಿತ ಜನರ ಸಂಘಟನೆ (ಪಿಯುಸಿಎಲ್‌) ಈ ಕುರಿತು ಶನಿವಾರ ವರದಿಯನ್ನು ಬಿಡುಗಡೆ ಮಾಡಿದೆ. ಕುಟುಂಬಕ್ಕೆ ಭದ್ರತೆ ನೀಡಬೇಕು ಹಾಗೂ ನಿರ್ಭಯ ನಿಧಿಯಡಿ ಅವರಿಗೆ ಪುನರ್‌ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಇಡೀ ಕುಟುಂಬ ಸದ್ಯ ಗೃಹಬಂಧನದಲ್ಲಿದೆ. ಅವರ ಸಾಮಾಜಿಕ ಬದುಕು ಸಮಾಜದಿಂದ ಪ್ರತ್ಯೇಕಗೊಂಡಿದೆ ಎಂದು ಪಿಯುಸಿಎಲ್‌ ಸದಸ್ಯರಾದ ಕಮಲ್ ಸಿಂಗ್, ಫರ್ಮಾನ್ ನಕ್ವಿ ಇತರರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು