ಫಲಿತಾಂಶ, ಪ್ರಮಾಣಪತ್ರ ವಿತರಣೆ ವೇಳಾಪಟ್ಟಿ ಪ್ರಕಟಿಸಲ ದೆಹಲಿಗೆ ವಿ.ವಿಗೆ ನಿರ್ದೇಶನ

ನವದೆಹಲಿ: ಫಲಿತಾಂಶ ಘೋಷಣೆ, ಪ್ರಮಾಣಪತ್ರ ವಿತರಣೆ ಮತ್ತು ಘಟಿಕೋತ್ಸವ ಸಮಾರಂಭಗಳ ದಿನಾಂಕ ಕುರಿತಂತೆ ವೇಳಾಪಟ್ಟಿ ಪ್ರಕಟಿಸಬೇಕು ಎಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆಯಲು ಕೋರ್ಟ್ ಮೆಟ್ಟಿಲು ಏರುವ ಸ್ಥಿತಿ ಬರಬಾರದು. ಹಾಗಾಗಿ ದೆಹಲಿ ವಿಶ್ವವಿದ್ಯಾಲಯವು (ಡಿಯು) ಈ ಕುರಿತು ಅಫಿಡವಿಟ್ ಸಲ್ಲಿಸಬೇಕು’ ಎಂದೂ ಹೈಕೋರ್ಟ್ ಸೂಚಿಸಿದೆ.
‘ಹಿಂದೆ ವಿಶ್ವವಿದ್ಯಾಲಯ ಸಲ್ಲಿಸಿದ್ದ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ. ಇದರಲ್ಲಿ ಡಿಜಿಟಲ್ ಪದವಿ ಪ್ರಮಾಣಪತ್ರ ವಿತರಣೆ ಸೇರಿದಂತೆ ಇತರೆ ಕಾರ್ಯಗಳಿಗಾಗಿ ಸಮಯ ನಿಗದಿಸಿಲ್ಲ’ ಎಂದು ನ್ಯಾಯಮೂರ್ತಿ ಎಂ.ಪ್ರತಿಭಾ ಸಿಂಗ್ ಹೇಳಿದರು.
ಈ ಬಗ್ಗೆ ವಿ.ವಿಗೆ ಸ್ಪಷ್ಟ ನಿರ್ದೇಶನ ನೀಡಲು ಕೋರಿ ವೈದ್ಯರು, ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.