ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ ಧರ್ಮೀಯ ವಿವಾಹ; ದಂಪತಿಗೆ ರಕ್ಷಣೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ಸೂಚನೆ

ಪೊಲೀಸರಿಗೆ ನಿರ್ದೇಶನ
Last Updated 12 ಜೂನ್ 2021, 8:29 IST
ಅಕ್ಷರ ಗಾತ್ರ

ಅಲಹಬಾದ್‌: ಅಂತರ್‌ ಧರ್ಮೀಯ ವಿವಾಹವಾಗಿರುವ ದಂಪತಿಯ ಜೀವನದಲ್ಲಿ ಅವರ ಕುಟುಂಬದ ಸದಸ್ಯರುಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ ದಂಪತಿಗೆ ರಕ್ಷಣೆ ನೀಡುವಂತೆ ಮೊರದಾಬಾದ್‌ ಪೊಲೀಸರಿಗೆಅಲಹಾಬಾದ್‌ ಹೈಕೋರ್ಟ್‌ ನಿರ್ದೇಶನ ನೀಡಿದೆ.

‘ವಿವಾಹಿತ ಮಹಿಳೆ ಸ್ವ ಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ಆಕೆಯನ್ನು ಬಲವಂತದಿಂದ ಮತಾಂತರಗೊಳಿಸಲಾಗಿದೆ ಎಂಬುದಾಗಿ ಸ್ವತಃ ಆ ಮಹಿಳೆಯೇ ಆರೋಪ ಮಾಡದ ಹೊರತು, ಆಕೆಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತು.

ಪ್ರಕರಣದ ವಿವರ:‌ಉತ್ತರ ಪ್ರದೇಶದ ಮೊರದಾಬಾದ್‌ ಜಿಲ್ಲೆಯ ನಿವಾಸಿಗಳಾಗಿರುವ ಯಾಶಿ ದೇವಿ (20) ಮತ್ತು ಗುಚ್ಚಾನ್‌ ಖಾನ್‌(40) ಕಳೆದ ಜನವರಿ 11ರಂದು ಮದುವೆಯಾಗಿದ್ದು, ನಂತರ ಯಾಶಿ ದೇವಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ವಿವಾಹದ ನಂತರ,ಈ ದಂಪತಿ, ತಮ್ಮ ವೈವಾಹಿಕ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡದಂತೆ, ಪ್ರತಿವಾದಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಲೀಲ್‌ಕುಮಾರ್‌ ರೈ, ‘ದಂಪತಿ ಪ್ರಾಪ್ತ ವಯಸ್ಕರಾಗಿದ್ದರೆ, ಅವರಿಗೆ ಯಾರ ಹಸ್ತಕ್ಷೇಪವಿಲ್ಲದೆ ಶಾಂತಿಯುತವಾಗಿ ಜೀವನ ನಡೆಸವ ಹಕ್ಕು ಇದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT