ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿ: 50 ವರ್ಷಗಳಲ್ಲಿ 17 ಸಾವಿರಕ್ಕೂ ಹೆಚ್ಚು ಮಂದಿ ಸಾವು

Last Updated 4 ಜುಲೈ 2021, 10:56 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಬಿಸಿಗಾಳಿಗೆ 50 ವರ್ಷಗಳಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಹವಾಮಾನ ತಜ್ಞರು ಇತ್ತೀಚೆಗೆ ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.‌

ದೇಶದಲ್ಲಿ 1971–2019ರ ಅವಧಿಯಲ್ಲಿ ಬಿಸಿಗಾಳಿಯ 706 ಪ್ರಕರಣಗಳು ಸಂಭವಿಸಿವೆ.

ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್, ವಿಜ್ಞಾನಿಗಳಾದ ಕಮಲ್‌ಜಿತ್ ರೇ, ಎಸ್‌.ಎಸ್. ರೇ, ಆರ್‌.ಕೆ. ಗಿರಿ ಮತ್ತು ಎ.ಪಿ. ಧಿಮ್ರಿ ಅವರನ್ನೊಳಗೊಂಡ ತಂಡವು ಈ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಕಮಲ್‌ಜಿತ್ ರೇ ಅವರು ವರದಿಯ ಮುಖ್ಯ ಲೇಖಕರಾಗಿದ್ದಾರೆ.

‘ಬಿಸಿಗಾಳಿಯು ಹವಾಮಾನ ವೈಪರೀತ್ಯ ಘಟನೆಗಳಲ್ಲೊಂದಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕಳೆದ 50 ವರ್ಷಗಳ ಅವಧಿಯಲ್ಲಿ (1971–2019) ಸುಮಾರು 1,41,308 ಮಂದಿ ಸಾವಿಗೀಡಾಗಿದ್ದಾರೆ. ಅದರಲ್ಲಿ ಬಿಸಿಗಾಳಿಯ ಕಾರಣಕ್ಕಾಗಿಯೇ 17,362 ಮಂದಿ ಸಾವಿಗೀಡಾಗಿದ್ದಾರೆ’ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಬಿಸಿಗಾಳಿಯ ಪ್ರಕರಣಗಳು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲಿ ಸಂಭವಿಸಿವೆ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸಗಡ, ಬಿಹಾರ, ಜಾರ್ಖಂಡ್, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ತೀವ್ರ ಬಿಸಿಗಾಳಿಯ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT