ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಭಾರಿ ಮಳೆ: ಹಲವು ಪ್ರದೇಶ ಜಲಾವೃತ, ಅಂಡರ್‌ಪಾಸ್‌ಗಳಲ್ಲಿ ಸಂಚಾರ ನಿಷೇಧ

Last Updated 21 ಆಗಸ್ಟ್ 2021, 6:41 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಭಾರಿ ಮಳೆಯಾಗಿದ್ದು, ನಗರದ ಮಿಂಟೋ ಸೇತುವೆ, ಮೂಲ್‌ಚಂದ್ ಅಂಡರ್‌ಪಾಸ್ ಮತ್ತು ಐಟಿಒ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ನೀರು ನಿಂತಿದೆ.

ಹವಾಮಾನ ಇಲಾಖೆಯುದೆಹಲಿಗೆ ‘ಯಲ್ಲೋ ಅಲರ್ಟ್‌’ ಕೊಟ್ಟಿದ್ದು,ಮುಂದಿನ ಕೆಲ ದಿನಗಳ ವರೆಗೆ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮುನ್ನೆಚ್ಚರಿಕೆನೀಡಿದೆ.

ದೆಹಲಿಯ ಹಲವು ಭಾಗ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಿರ್ಣಾಯಕ ಅಂಡರ್‌ಪಾಸ್‌ಗಳಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ.

ಜಲಾವೃತವಾಗಿರುವ ಪ್ರದೇಶಗಳ ಸಮಸ್ಯೆ, ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಭಾರಿ ಮಳೆಯಿಂದಾಗಿ ಪುಲ್ ಪ್ರಹ್ಲಾದಪುರ ಅಂಡರ್‌ಪಾಸ್, ಲಜಪತ್ ನಗರ, ಜಂಗಪುರ, ಐಟಿಒ, ಪ್ರಗತಿ ಮೈದಾನದ ಸುತ್ತಲಿನ ರಸ್ತೆಗಳು, ಸಂಗಮ್ ವಿಹಾರ್, ರೋಹ್ಟಕ್ ರಸ್ತೆ, ಮಂಗೋಲ್‌ಪುರಿ, ಕಿರರಿ ಮತ್ತು ಮಾಳವೀಯ ನಗರಗಳಲ್ಲಿ ನೀರು ನಿಂತಿದೆ.

ದಕ್ಷಿಣ ದೆಹಲಿಯ ಮೆಹ್ರೌಲಿ-ಬದರಪುರ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಸಂಚಾರವನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT