ಭಾನುವಾರ, ಅಕ್ಟೋಬರ್ 2, 2022
20 °C

ಉತ್ತರ ಪ್ರದೇಶ: ನಾಥೂರಾಮ್ ಗೋಡ್ಸೆ ಫೋಟೊ ಜತೆ ಹಿಂದೂ ಮಹಾಸಭಾ ತಿರಂಗಾ ಯಾತ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಜಫ್ಫರ್‌ನಗರ: ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರ ಫೋಟೊದೊಂದಿಗೆ ತಿರಂಗಾ ಯಾತ್ರೆ ಆಯೋಜಿಸಿರುವುದು ತಿಳಿದುಬಂದಿದೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹಿಂದೂ ಮಹಾಸಭಾ ಸೋಮವಾರ ತಿರಂಗಾ ಯಾತ್ರೆ ಆಯೋಜಿಸಿತ್ತು. ಯಾತ್ರೆಯಲ್ಲಿ ತಿರಂಗಾ ಜತೆ ಗೋಡ್ಸೆ ಫೋಟೊ ಬಳಸಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಗೋಡ್ಸೆಯೂ ಸೇರಿದಂತೆ ಕೆಲವು ಕ್ರಾಂತಿಕಾರಿಗಳ ಫೋಟೊಗಳ ಜತೆ ನಮ್ಮ ಕಾರ್ಯಕರ್ತರು ಯಾತ್ರೆ ನಡೆಸಿದ್ದಾರೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ವರ್ಮಾ ಮಂಗಳವಾರ ತಿಳಿಸಿದ್ದಾರೆ.

ರಾಷ್ಟ್ರಕ್ಕೆ ವಿರುದ್ಧವಾಗಿದ್ದ ಗಾಂಧಿಯವರ ನೀತಿಗಳ ವಿರುದ್ಧ ಗೋಡ್ಸೆ ಕ್ರಮ ಕೈಗೊಂಡಿದ್ದರು ಎಂಬುದಾಗಿ ನಾವು ಭಾವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು