ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪ್ರಕರಣ; ಬಜರಂಗದಳದಿಂದ ಪ್ರತಿಭಟನೆ

Last Updated 3 ಜನವರಿ 2021, 1:57 IST
ಅಕ್ಷರ ಗಾತ್ರ

ಅಲಿಗಡ (ಉತ್ತರ ಪ್ರದೇಶ): ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಖಂಡಿಸಿ ಉತ್ತರ ಪ್ರದೇಶ ಅಲಿಗಡದ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ಪಾಕಿಸ್ತಾನ ಧ್ವಜಗಳನ್ನು ರಸ್ತೆಯಲ್ಲಿ ಅಂಟಿಸಿ ಪಾಕ್ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ಬಜರಂಗದಳ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಡಿಸೆಂಬರ್ 30ರಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಸ್ಥಿತಗೊಂಡಿದ್ದ ಹಿಂದೂ ದೇವಾಲಯವನ್ನು ಕಿಡಿಗೇಡಿಗಳು ನೆಲಸಮಗೊಳಿಸಿದ್ದರು. ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರ ಗುಂಪು ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿತ್ತು.

ಪಾಕಿಸ್ತಾನ ಸರ್ಕಾರ ವಿರುದ್ದ ಘೋಷಣೆಗಳನ್ನು ಕೂಗಿದ ಬಜರಂಗದಳ ಬೆಂಬಲಿಗರು ಭಾರತೀಯ ಸರ್ಕಾರವು ವಿಶ್ವ ಸಂಸ್ಥೆಯಲ್ಲಿ ಈ ವಿಷಯ ಎತ್ತಬೇಕೆಂದು ಮನವಿ ಮಾಡಿದರು.

ಅಲಿಗಡ ಮುಖ್ಯ ರಸ್ತೆಗಳಲ್ಲಿ ನಾವು ಪಾಕಿಸ್ತಾನ ಧ್ವಜಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದ್ದೇವೆ. ಪಾಕಿಸ್ತಾನ ಉಗ್ರಗಾಮಿಗಳು ಅಲ್ಲಿನ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳನ್ನು ಕೆಡವಲು ಯಾರಿಂದಲೂ ಸಾಧ್ಯವಾಗಬಾರದು ಎಂಬುದನ್ನು ಖಚಿತಪಡಿಸಬೇಕಿದೆ ಎಂದು ಬಜರಂಗದಳ ಮುಖಂಡ ಗೌರವ್ ಶರ್ಮಾ ಹೇಳಿದರು.

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಪ್ರಕರಣದ ವಿರುದ್ಧ ಭಾರತೀಯ ರಾಯಭಾರವು ಜನವರಿ 1ರಂದು ಪ್ರತಿಭಟನೆ ವ್ಯಕ್ತಪಡಿಸಿತ್ತು. ವಿಶ್ವವ್ಯಾಪಿ ಮಾನವ ಹಕ್ಕುಗಳ ಹೋರಾಟಗಾರರು ಘಟನೆಯನ್ನು ಖಂಡಿಸಿದೆ.

ಜಮಿಯತ್ ಉಲೆಮಾ-ಇ ಇಸ್ಲಾಂ- ಫಜಲ್ (ಜಿಯುಐ-ಎಫ್) ರ‍್ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಜನರ ಗುಂಪು, ದೇವಾಲಯಕ್ಕೆ ನುಗ್ಗಿ ಬೆಂಕಿ ಹಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT