ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜ್ಬುಲ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಹತ್ಯೆ

Last Updated 6 ಮೇ 2022, 12:59 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್‌–ಮುಜಾಹಿದ್ದೀನ್‌(ಎಚ್‌ಎಂ) ಸಂಘಟನೆಯ ಅತ್ಯುನ್ನತ ಕಮಾಂಡರ್‌ ಸೇರಿ ಮೂವರು ಉಗ್ರರು ಹತರಾಗಿದ್ದಾರೆ.

ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಮೊಹಮ್ಮದ್‌ ಆಶ್ರಫ್‌ ಖಾನ್‌ ಅಲಿಯಾಸ್‌ ಮೌಲ್ವಿ (57), ಸ್ಥಳೀಯ ಉಗ್ರರಾದ ರೋಷನ್‌ ಜಮೀರ್‌ ಹಾಗೂ ರಫಿಕ್‌ ಅಹ್ಮದ್‌ ಹತ್ಯೆಯಾದವರು.

‘ಭಾರತೀಯ ಸೇನೆಯ 19–ರಾಷ್ಟ್ರೀಯ ರೈಫಲ್ಸ್‌, ಸಿಆರ್‌ಪಿಎಫ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ ಸಮೀಪದ ಬಾಟ್‌ಕೂಟ್‌ ಎಂಬ ಅರಣ್ಯ ಪ್ರದೇಶದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ದೀರ್ಘಕಾಲ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಹಿಜ್ಬುಲ್‌–ಮುಜಾಹಿದ್ದೀನ್‌ ಸಂಘಟನೆಯ ಉಗ್ರ ಆಶ್ರಫ್‌ ಮೌಲ್ವಿ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಯಾತ್ರಾ ಮಾರ್ಗದಲ್ಲಿ ನಡೆದ ಕಾರ್ಯಾಚರಣೆಯು ನಮಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಆಗಸ್ಟ್ 2 ರಂದು ಜಮ್ಮು–ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದ ಟಾಪ್– 10 ಭಯೋತ್ಪಾದಕರ ಪಟ್ಟಿಯಲ್ಲಿ ಆತನ ಹೆಸರು ಕಾಣಿಸಿಕೊಂಡಿತ್ತು.ಎ++ ವರ್ಗದ ಉಗ್ರನಾಗಿರುವ ಅನಂತನಾಗ್‌ ಮೂಲದ ಮೌಲ್ವಿಯು 2013ರಿಂದ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ.ಸ್ಥಳೀಯರನ್ನು ಉಗ್ರರ ಪಡೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.2020ರಲ್ಲಿ ಪುಲ್ವಾಮಾ ಜಿಲ್ಲೆಯಲ್ಲಿ ಕಮಾಂಡರ್‌ ರಿಯಾಜ್ ನೈಕೂನನ್ನು ಭದ್ರತಾ ಪಡೆಗಳು ಹತ್ಯೆಗೈದ ನಂತರ ಹಿಜ್ಬುಲ್ ಮುಖ್ಯಸ್ಥನಾಗಿ ಮೌಲ್ವಿ ನೇಮಕಗೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT