ಗುರುವಾರ , ಮಾರ್ಚ್ 23, 2023
31 °C

11 ದಿನಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 40ಲಕ್ಷದಿಂದ 50 ಲಕ್ಷಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಬುಧವಾರ 90,123 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 39,42,360 ಮಂದಿ ಚೇತರಿಸಿಕೊಂಡಿದ್ದಾರೆ. ಅದೇ ವೇಳೆ ಸೋಂಕು ಪ್ರಕರಣಗಳ ಸಂಖ್ಯೆ 40 ಲಕ್ಷದಿಂದ 50 ಲಕ್ಷಕ್ಕೆ ತಲುಪಲು ತಗುಲಿದ ಅವಧಿ  ಕೇವಲ 11ದಿನಗಳು.

ಬುಧವಾರ ಬೆಳಗ್ಗೆ 8 ಗಂಟೆಗೆ ಅಪ್‌ಡೇಟ್ ಆಗಿರುವ ಅಂಕಿ ಅಂಶದ ಪ್ರಕಾರ ಸೋಂಕು ಪ್ರಕರಣಗಳ ಸಂಖ್ಯೆ 50,20,359ಕ್ಕೆ ತಲುಪಿದೆ.  ಕಳೆದ 24 ಗಂಟೆಯಲ್ಲಿ 1,290 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 82,066ಕ್ಕೇರಿದೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10 ಲಕ್ಷದಿಂದ 20 ಲಕ್ಷಕ್ಕೆ ತಲುಪಲು 21 ದಿನಗಳು, 30 ಲಕ್ಷ ತಲುಪಲು 16 ದಿನಗಳು, 40 ಲಕ್ಷ ತಲುಪಲು 13 ದಿನಗಳು ಮತ್ತು 11 ದಿನಗಳಲ್ಲಿ 50 ಲಕ್ಷಕ್ಕೆ ತಲುಪಿದೆ.

ಸೋಂಕು ಪ್ರಕರಣಗಳು ಒಂದು ಲಕ್ಷ  ತಲುಪಲು 110 ದಿನಗಳು ಬೇಕಾಗಿತ್ತು ಆದರೆ 59 ದಿನಗಳಲ್ಲಿ 10 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದವು.

ಕೋವಿಡ್‌ ಸಾವು ಪ್ರಮಾಣವು ಶೇ.1.63ರಷ್ಟು ಇಳಿಕೆ ಆಗಿದೆ. ದೇಶದಲ್ಲಿ 9,95,933 ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣದ ಶೇಕಡಾ 19.84 ರಷ್ಟಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಐಸಿಎಂಆರ್ ಪ್ರಕಾರ, ಸೆಪ್ಟೆಂಬರ್ 15 ರವರೆಗೆ ಒಟ್ಟು 5,94,29,115 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 11,16,842 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು