ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ನಿತ್ಯ 1.25 ಕೋಟಿ ಕೋವಿಡ್ ಲಸಿಕೆ ಹಂಚಿಕೆ: ಪ್ರಧಾನಿ ನರೇಂದ್ರ ಮೋದಿ

Last Updated 6 ಸೆಪ್ಟೆಂಬರ್ 2021, 9:20 IST
ಅಕ್ಷರ ಗಾತ್ರ

ಶಿಮ್ಲಾ: ‘ಭಾರತದಲ್ಲಿ ಪ್ರತಿ ನಿತ್ಯ 1.25 ಕೋಟಿ ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ನೀಡುತ್ತಿದ್ದು, ಇದು ವಿಶ್ವದ ಹಲವು ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು‘ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಚಾರ–ಸಾರಿಗೆ ಸೌಲಭ್ಯಗಳ ಸಮಸ್ಯೆಯ ನಡುವೆಯೂ ಹಿಮಾಚಲ ಪ್ರದೇಶ ಸರ್ಕಾರ ಅರ್ಹ ಜನರಿಗೆ ಕೋವಿಡ್‌ ಲಸಿಕೆ ನೀಡುವ ಮೂಲಕ, ದೇಶದ ಮೊದಲ ‘ಚಾಂಪಿಯನ್‌‘ ಆಗಿದೆ ಎಂದರು.

ಸೋಮವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಿಮಾಚಲ ಪ್ರದೇಶ ರಾಜ್ಯದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ಲಸಿಕೆ ಪಡೆದಿರುವ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಗುಡ್ಡಗಾಡು ರಾಜ್ಯದಲ್ಲಿ ನಡೆದಿರುವ ಕೋವಿಡ್‌ ಲಸಿಕೆ ಕಾರ್ಯಕ್ರಮದ ಪ್ರಗತಿಯನ್ನು ಶ್ಲಾಘಿಸಿದರು.

‘ಕಾಲಿನ ಮೂಳೆ ಮುರಿದಿದ್ದರೂ, ಜನರಿಗೆ ಲಸಿಕೆ ನೀಡುವುದನ್ನು ತಪ್ಪಿಸದ ಉನಾ ಪಟ್ಟಣದ ಆರೋಗ್ಯ ಕಾರ್ಯಕರ್ತೆ ಕಾರ್ಮೊದೇವಿಯವರ ಕಾರ್ಯವನ್ನು ಮೋದಿ ಇದೇ ವೇಳೆ ಶ್ಲಾಘಿಸಿದರು. ಇಲ್ಲಿವರೆಗೆ ನಾನು 22,500 ಡೋಸ್‌ಗಳಷ್ಟು ಲಸಿಕೆ ನೀಡಿದ್ದೇನೆ‘ ಎಂದು ಕಾರ್ಮೊದೇವಿಯವರು ತಿಳಿಸಿದರು.

ಏತನ್ಮಧ್ಯೆ, ಲೌಹಾಲ್-ಸ್ಪಿತಿ ಕಣಿವೆಯ ನವಾಂಗ್ ಉಪಶಾಕ್ ಅವರು, ಮೋದಿಯವರಿಗೆ ಅಟಲ್ ಸುರಂಗ ಮಾರ್ಗವು ಬುಡಕಟ್ಟು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಿದೆ. ಈ ಭಾಗದಲ್ಲಿ ಹೋಮ್‌ ಸ್ಟೇಗಳನ್ನು ತೆರೆಯಲು ಅವಕಾಶ ನೀಡುವಂತೆ 700 ರಿಂದ 800 ಸ್ಥಳೀಯ ನಿವಾಸಿಗಳು ಪ್ರಾಧಿಕಾರದ ಅನುಮತಿ ಕೋರಿರುವುದಾಗಿ‘ ಪ್ರಧಾನಿಯವರ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT