ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಕ್ಷೇತ್ರದಲ್ಲಿ ಭಾರತ ಅಮೆರಿಕದ ಸಿಲಿಕಾನ್ ವ್ಯಾಲಿಗಿಂತ ಮುಂದಿದೆ: ಅನುರಾಗ್

Last Updated 5 ಫೆಬ್ರುವರಿ 2023, 10:32 IST
ಅಕ್ಷರ ಗಾತ್ರ

ಹಮೀರ್‌ಪುರ/ಶಿಮ್ಲಾ: ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತ ಅಮೆರಿಕದ ಸಿಲಿಕಾನ್ ವ್ಯಾಲಿಗಿಂತಲೂ ಮುಂದಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಉನಾದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಕೋವಿಡ್ ಲಸಿಕಾ ಪ್ರಮಾಣಪತ್ರ ಡಿಜಿಟಲ್‌ ಆಗಿ ಲಭ್ಯವಿದ್ದು, ಉಳಿದ ದೇಶಗಳಲ್ಲಿ ಇನ್ನೂ ಪೇಪರ್‌ನಲ್ಲಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ದೇಶವು ಇಂದು ಡಿಜಿಟಲ್ ಆರ್ಥಿಕತೆಯತ್ತ ಸಾಗುತ್ತಿದ್ದು, ಚಹಾ ಮಾರುವವನಿಂದ ಹಿಡಿದು ರಸ್ತೆ ಬೀದಿಯ ಎಲ್ಲ ವ್ಯಾಪಾರಿಗಳು ಇಂಟರ್‌ನೆಟ್ ಸಹಾಯದಿಂದ ವಹಿವಾಟು ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ₹12.62 ಲಕ್ಷ ಕೋಟಿ ಮೌಲ್ಯದ ಡಿಜಿಟಲ್ ವಹಿವಾಟು ನಡೆದಿದೆ ಎಂದು ಹೇಳಿದರು.

ಒಂಬತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಣದುಬ್ಬರವು ಶೇ 12ರಷ್ಟಿತ್ತಲ್ಲದೆ ಭ್ರಷ್ಟಾಚಾರದಿಂದ ತುಂಬಿಕೊಂಡಿತ್ತು. ಇಂದು ಅಮೆರಿಕದಂತಹ ರಾಷ್ಟ್ರಗಳು ಶೇ 8.3ರ ಹಣದುಬ್ಬರದೊಂದಿಗೆ ಹೋರಾಡುತ್ತಿರುವ ಭಾರತದ ಹಣದುಬ್ಬರ ದರ ಶೇ 5.7ರಷ್ಟಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ದೇಶದ ಆರ್ಥಿಕತೆ ಶೇ 7ರಷ್ಟು ಬೆಳವಣಿಗೆಯಾಗಲಿದೆ. ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹೋಲಿಸಿದರೆ ವಿದೇಶಿ ನೇರ ಹೂಡಿಕೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ದೇಶದಲ್ಲಿ ನವೋದ್ಯಮಗಳ (ಸ್ಟಾರ್ಟ್‌ಅಪ್) ಸಂಖ್ಯೆ 90,000 ಆಗಿದೆ ಎಂದು ಉಲ್ಲೇಖ ಮಾಡಿದರು.

ಕೋವಿಡ್ ಸಾಂಕ್ರಾಮಿಕದ ಕಠಿಣ ಸಮಯದಲ್ಲೂ ಕೇಂದ್ರ ಸರ್ಕಾರ, 220 ಕೋಟಿ ಕೊರೊನಾ ಲಸಿಕೆಗಳನ್ನು ಉಚಿತವಾಗಿ ನೀಡಿದೆ. ಅಲ್ಲದೆ ₹4 ಲಕ್ಷ ಕೋಟಿ ವೆಚ್ಚದಲ್ಲಿ 80 ಕೋಟಿ ಬಡವರಿಗೆ 28 ತಿಂಗಳ ಕಾಲ ಉಚಿತ ಆಹಾರ ಧ್ಯಾನ ವಿತರಿಸಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT