ಅಣುಶಕ್ತಿ ಸಾಮರ್ಥ್ಯ:ಭಾರತ–ಪಾಕಿಸ್ತಾನನಡುವೆ ಮಾಹಿತಿ ವಿನಿಮಯ
ನವದೆಹಲಿ: ಕಳೆದ 30 ವರ್ಷಗಳಿಂದ ಚಾಲ್ತಿಯಲ್ಲಿರುವ ಕ್ರಮದಂತೆ, ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿ ಭಾರತ ಮತ್ತು ಪಾಕಿಸ್ತಾನ ಶುಕ್ರವಾರ ಅಣುಶಕ್ತಿ ಸಾಮರ್ಥ್ಯ ಕುರಿತ ಮಾಹಿತಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡವು.
ಎರಡೂ ರಾಷ್ಟ್ರಗಳಲ್ಲಿರುವ ಅಣು ಘಟಕಗಳ ಮೇಲೆ ಪರಸ್ಪರ ದಾಳಿ ನಡೆಸದಂತೆ ಈ ಒಪ್ಪಂದ ನಿರ್ಬಂಧ ಹೇರುತ್ತದೆ. ನವದೆಹಲಿ ಮತ್ತು ಇಸ್ಲಾಮಾಬಾದ್‌ದಲ್ಲಿ ಇರುವ ಪರಸ್ಪರ ರಾಜತಾಂತ್ರಿಕ ವ್ಯವಸ್ಥೆಯ ಮೂಲಕ ಈ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಕಾಶ್ಮೀರ ವಿವಾದ ಮತ್ತು ಗಡಿರೇಖೆಯುದ್ದಕ್ಕೂ ಇರುವ ಭಯೋತ್ಪಾದನಾ ಆತಂಕದ ಸ್ಥಿತಿಯ ನಡುವೆ ಈ ಮಾಹಿತಿಯ ವಿನಿಮಯ ನಡೆದಿದೆ. ಉಭಯ ದೇಶಗಳ ನಡುವೆ 1988ರ ಡಿಸೆಂಬರ್ 31ರಂದು ಒಪ್ಪಂದವಾಗಿದ್ದು, ಇದು 1991ರ ಜನವರಿ 27ರಿಂದ ಜಾರಿಗೆ ಬಂದಿದೆ. ಪ್ರತಿ ವರ್ಷ ಜ.1ರಂದು ಈ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.