ನವದೆಹಲಿ: ಪೂರ್ವ ಲಡಾಖ್ನಲ್ಲಿ ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನಲ್ಲಿ ಭಾರತವನ್ನು ಪರೀಕ್ಷಿಸಲಾಗುತ್ತಿದ್ದು, ಈ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಿರುವ ಭಾರತವು ರಾಷ್ಟ್ರೀಯ ಭದ್ರತಾ ಸವಾಲನ್ನು ನಿಭಾಯಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶನಿವಾರ ಹೇಳಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕಿ) ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಜೈಶಂಕರ್, ಪೂರ್ವ ಲಡಾಖ್ನಲ್ಲಿ ನಡೆದ ಘಟನೆಯು ಚೀನಾ ಹಿತಾಸಕ್ತಿಗೆ ಪೂರಕವಾಗಿರಲಿಲ್ಲ. ಆದರೆ ಭಾರತದ ಜನರ ಭಾವನೆಯ ಮೇಲೆ ತೀವ್ರವಾಗಿ ಪರಿಣಾಮ ಬೀರಿತ್ತು’ ಎಂದರು.

ವಾಸ್ತವ ನಿಯಂತ್ರಣ ರೇಖೆಯಲ್ಲಿ(ಎಲ್ಎಸಿ) ನಡೆದ ಘಟನೆಯು ದುಗುಡಗೊಳಿಸುವಂತಹದು ಎಂದು ಉಲ್ಲೇಖಿಸಿದ ಜೈಶಂಕರ್, ‘ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಕ್ಕೆ ಎರಡೂ ಕಡೆಯಿಂದಲೂ ಹೆಚ್ಚಿನ ಕೆಲಸಗಳು ನಡೆದಿವೆ. ಆದರೆ ಈ ವರ್ಷ ನಡೆದ ಘಟನೆಯು ಇದಕ್ಕೆ ಪೂರಕವಾಗಿರಲಿಲ್ಲ. ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಂತಹ ಸೌಹಾರ್ದತೆಯು ನಾಶವಾಗುತ್ತದೆಯೇ ಎನ್ನುವ ಆತಂಕ ಎದುರಾಗಿದೆ. ಹೌದು, ನಮ್ಮನ್ನು ಪರೀಕ್ಷಿಸಲಾಗುತ್ತಿದೆ. ಇದನ್ನು ಮೆಟ್ಟಿನಿಲ್ಲುವ ಭರವಸೆಯು ನನಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.