ಗುರುವಾರ , ಅಕ್ಟೋಬರ್ 22, 2020
22 °C

ಕೋವಿಡ್‌ ವಿರುದ್ಧ ಭಾರತವು ಜನಕೇಂದ್ರಿತ ಹೋರಾಟ ನಡೆಸುತ್ತಿದೆ: ಪ್ರಧಾನಿ ಮೋದಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟವು ಜನಕೇಂದ್ರಿತವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಅವರು, 'ಕೋವಿಡ್‌-19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟವು ಜನಕೇಂದ್ರಿತವಾಗಿದೆ. ಕೋವಿಡ್‌ ವಾರಿಯರ್‌ಗಳಿಂದ ಈ ಹೋರಾಟಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಿವೆ. ಇದೇ ರೀತಿಯ ಕಾರ್ಯಗಳನ್ನು ಮುಂದುವರೆಸಿ ನಮ್ಮ ನಾಗರಿಕರನ್ನು ವೈರಸ್‌ನಿಂದ ರಕ್ಷಿಸಬೇಕಿದೆ' ಎಂದು ಮೋದಿ ಹೇಳಿದ್ದಾರೆ.

#Unite2FightCorona! ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿರುವ ಮೋದಿ, 'ಕೊರೊನಾ ವಿರುದ್ಧ ಹೋರಾಡಲು ನಾವು ಒಂದಾಗೋಣ. ಮುಖವಾಡ ಧರಿಸುವುದು, ಕೈ ತೊಳೆಯುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯದಿರೋಣ. ಒಂದಾಗಿ ನಾವು ಯಶಸ್ವಿಯಾಗೋಣ. ಒಟ್ಟಿನಲ್ಲಿ, ನಾವು ಕೋವಿಡ್‌ ವಿರುದ್ಧ ಗೆಲುವು ಸಾಧಿಸೋಣ' ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 68,35,656ಕ್ಕೆ ಏರಿಕೆಯಾಗಿದ್ದು, ಆ ಪೈಕಿ 1,05,526 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 58,27,705 ಮಂದಿ ಚೇತರಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು