ಮಂಗಳವಾರ, ಜೂನ್ 28, 2022
26 °C

ಡಿಸೆಂಬರ್‌ಗೆ ದೇಶದ ಪ್ರಥಮ ಸೆಮಿ ಹೈಸ್ಪೀಡ್ ರೈಲು

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ದೇಶದ ಪ್ರಪ್ರಥಮ ಸೆಮಿ ಹೈಸ್ಪೀಡ್‌ ಸರಕು ಸಾಗಣೆ ರೈಲು ಈ ವರ್ಷದ ಡಿಸೆಂಬರ್‌ ವೇಳೆಗೆ ಸೇವೆ ಆರಂಭಿಸುವ ನಿರೀಕ್ಷೆಯಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ವಂದೇ ಭಾರತ್‌’ ರೈಲುಗಳ ಮಾದರಿಯಲ್ಲಿ 16 ಬೋಗಿಗಳಿರುವ ‘ಗತಿ ಶಕ್ತಿ’ ರೈಲು ಕಾರ್ಯಾರಂಭ ಮಾಡಲಿದೆ. ಇದರ ವೇಗ ಗಂಟೆಗೆ 160 ಕಿ.ಮೀ. ಚೆನ್ನೈನಲ್ಲಿ ಇರುವ ಸಮಗ್ರ ಬೋಗಿ ನಿರ್ಮಾಣ (ಐಸಿಎಫ್‌) ಇದರ ನಿರ್ಮಾಣ ನಡೆಯಲಿದೆ.

ಪ್ರಧಾನಿಯವರ ‘ಗತಿ ಶಕ್ತಿ’ ರೈಲು ಸೇವೆ ಚಿಂತನೆ ಸಾಕಾರಗೊಳಿಸಲು ರೈಲ್ವೆ ಮಂಡಳಿಯಲ್ಲಿ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಲಾಗಿದೆ. ತ್ವರಿತಗತಿಯಲ್ಲಿ ಜಾರಿಗೊಳಿಸಲು ಬೆಂಗಳೂರು, ದೆಹಲಿ, ಬಿಲಾಸ್‌ಪುರ್‌ದಲ್ಲಿಯೂ ಶಾಖೆ ತೆರೆಯಲಾಗಿದೆ.

‘ಮಾರುಕಟ್ಟೆಯಲ್ಲಿನ ಪ್ರತಿಕ್ರಿಯೆ ಆಧರಿಸಿ ಇಂತಹ ಎಷ್ಟು ರೈಲುಗಳ ಸೇವೆ ಆರಂಭಿಸಬೇಕು ಎಂದು ನಿರ್ಧರಿಸಲಾಗುವುದು. ಒಟ್ಟು 25 ರೈಲು ಆರಂಭಿಸುವ ಗುರಿ ಇದೆ’ ಎಂದು ಐಸಿಎಫ್‌ನ ಪ್ರಧಾನ ವ್ಯವಸ್ಥಾಪಕ ಎ.ಕೆ.ಅಗರವಾಲ್‌ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು