ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದ ಸಿಖ್‌, ಹಿಂದೂಗಳಿಗೆ ಭಾರತದ ಇ–ವೀಸಾ

Last Updated 19 ಜೂನ್ 2022, 13:59 IST
ಅಕ್ಷರ ಗಾತ್ರ

ನವದೆಹಲಿ: ಕಾಬೂಲ್‌ ಗುರುದ್ವಾರದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿರುವ ನೂರಕ್ಕೂ ಹೆಚ್ಚು ಸಿಖ್‌ ಮತ್ತು ಹಿಂದೂಗಳಿಗೆ ಕೇಂದ್ರ ಸರ್ಕಾರ ಆದ್ಯತೆಯ ಇ–ವೀಸಾ ನೀಡಿದೆ.

ಈ ಜನರಿಗೆ ಎಲೆಕ್ಟ್ರಾನಿಕ್ ವೀಸಾಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಆದ್ಯತೆಯ ಮೇಲೆ ವಿತರಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಭಾನುವಾರ ತಿಳಿಸಿವೆ.

ಅಫ್ಘಾನಿಸ್ತಾನದ ರಾಜಧಾನಿಯ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ಹೊತ್ತಿದೆ. ಈ ದಾಳಿಯಲ್ಲಿ ಒಬ್ಬ ಸಿಖ್ ಸೇರಿ ಇಬ್ಬರು ಹತರಾಗಿದ್ದು, ಇದು ಪ್ರವಾದಿ ಮಹಮ್ಮದ್‌ರನ್ನು ಬೆಂಬಲಿಸುವ ಕ್ರಿಯೆ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ.

ಕಾಬೂಲ್‌ನ ಬಾಗ್-ಎ ಬಾಲಾ ಪಕ್ಕದ ಗುರುದ್ವಾರ ಕರ್ತೆ ಪರ್ವಾನ್‌ನಲ್ಲಿ ಶನಿವಾರ ಹಲವು ಬಾರಿ ಸ್ಫೋಟಗಳು ಸಂಭವಿಸಿವೆ. ಸ್ಫೋಟಕಗಳಿದ್ದ ವಾಹನವು ಸಿಖ್‌ರ ಆರಾಧನಾ ಸ್ಥಳ ಪ್ರವೇಶಿಸಿದಂತೆ ಅಫ್ಗಾನ್‌ ಭದ್ರತಾ ಸಿಬ್ಬಂದಿ ತಡೆಯುವ ಮೂಲಕ ಭಾರಿ ದುರಂತ ತಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT