ಮಂಗಳವಾರ, ಅಕ್ಟೋಬರ್ 27, 2020
19 °C

ಚೀನಾ ಪ್ರಸ್ತಾವಿತ 1959ರ ನೈಜ ಗಡಿ ನಿಯಂತ್ರಣ ರೇಖೆಯನ್ನು ಎಂದೂ ಒಪ್ಪಲ್ಲ: ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ನೈಜ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) 1959ರ ಗ್ರಹಿಕೆಗೆ ಬದ್ಧವಾಗಿರುವ ಚೀನಾದ ನಿಲುವನ್ನು ಭಾರತ ಮಂಗಳವಾರ ಮತ್ತೊಮ್ಮೆ ಸ್ಪಷ್ಟವಾಗಿ ತಿರಸ್ಕರಿಸಿದೆ. ವಾಸ್ತವಿಕ ಗಡಿಯ 'ಒಪ್ಪಲಾಗದ ಏಕಪಕ್ಷೀಯ’ ವ್ಯಾಖ್ಯಾನವನ್ನು ಮುಂದುವರಿಸದಂತೆ ಭಾರತ ಚೀನಾಕ್ಕೆ ಆಗ್ರಹಿಸಿದೆ.

ಪೂರ್ವ ಲಡಾಕ್‌ನಲ್ಲಿ ಎರಡೂ ದೇಶಗಳ ನಡುವೆ ಗಡಿಗೆ ಸಂಬಂಧಿಸಿದಂತೆ ಎದುರಾಗಿರುವ ಪ್ರಕ್ಷುಬ್ಧ ಸ್ಥಿತಿಯ ನಡುವೆಯೇ ಗಡಿಗೆ ಸಂಬಂಧಿಸಿದ ತನ್ನ ನಿಲುವನ್ನು ಚೀನಾ ತನ್ನ ವಿದೇಶಾಂಗ ಸಚಿವಾಲಯದ ಮೂಲಕ ತಿಳಿಸಿದೆ. ನೈಜ ನಿಯಂತ್ರಣಾ ರೇಖೆಗೆ ಸಂಬಂಧಿಸಿದಂತೆ 1959ರ ಪ್ರಸ್ತಾವವನ್ನು ತಾನು ಅನುಸರಿಸುವುದಾಗಿ ಅದು ತಿಳಿಸಿದೆ. ಆದರೆ, ಈ ಪ್ರಸ್ತಾವವನ್ನು ಭಾರತದ ಎಂದಿನಂತೆ ಈ ಸಲವೂ ತಳ್ಳಿಹಾಕಿದೆ.

‘ಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ 1959ರ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಯನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. 1959ರ ನೈಜ ಗಡಿ ಚೀನಾದ ಪರವಾದದ್ದು ಎಂಬ ಸಂಗತಿ ಗೊತ್ತಿರುವ ವಿಚಾರ,’ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

‘ಚೀನಾದ ಅಂದಿನ ಪ್ರಧಾನಿ ಝೌ ಎನ್ಲೈ ಅವರು ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ನವೆಂಬರ್ 7, 1959ರಲ್ಲಿ ಪತ್ರ ಬರೆದು ಪ್ರಸ್ತಾಪಿಸಿದ ನೈಜ ಗಡಿಗೆ ಚೀನಾ ಬದ್ಧವಾಗಿದೆ,’ ಎಂಬ ಅದರ ವಿದೇಶಾಂಗ ಇಲಾಖೆ ವಕ್ತಾರ ಹೇಳಿಕೆಗೆ ಹಿನ್ನೆಲೆಯಲ್ಲಿ ಭಾರತ ಈ ನಿಲುವು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು